ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದ್ದು, ಪ್ರಜಾಧ್ವನಿ ಬಸ್ ಯಾತ್ರೆ ಆರಂಭಿಸಿದೆ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಬಗ್ಗೆ ಸಚಿವ ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ. ಇದು ಪ್ರಜಾಧ್ವನಿ ಯಾತ್ರೆಯಲ್ಲ, ಜನರ ಶೋಕ ಯಾತ್ರೆ ಎಂದು ವಾಗ್ದಾಳಿ ನಡೆಸಿದ್ದಾರೆ
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಕಾಂಗ್ರೆಸ್ ನವರು ಯಾವತ್ತೂ ಪ್ರಜಾಧ್ವನಿಗೆ ಮಹತ್ವ ಕೊಟ್ಟವರೇ ಅಲ್ಲ, ಅವರು ಕುಟುಂಬ ರಾಜಕಾರಣಕ್ಕೆ ಮಾನ್ಯತೆ ಕೊಡುವವರು, ಪ್ರಜಾಧ್ವನಿ ಬಸ್ ಯಾತ್ರೆ ಕಾಂಗ್ರೆಸ್ ಶೋಕ ಯಾತ್ರೆಯಾಗಲಿದೆ. ಕಾಂಗ್ರೆಸ್ ಓಡುವ ಬಸ್ ಅಲ್ಲ, ದೂಡುವ ಬಸ್ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತವಾಗಿ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಾರೆ. ಸಿದ್ದರಾಮಯ್ಯ ಕರೆಂಟ್ ಇಲ್ಲದೇ ಬಜೆಟ್ ಮಂಡಿಸಿದ್ದಾರೆ ಉಚಿತವಾಗಿ 200 ಯುನಿಟ್ ವಿದ್ಯುತ್ ಕೊಡುವುದಾಗಿ ಹೇಳಿದ್ದಾರೆ. ವಯಸ್ಸಾಗಿದೆ ಸಿದ್ದರಾಮಯ್ಯ ಸೆಲ್ಫ್ ರಿಟೈರ್ ಮೆಂಟ್ ತೆಗೆದುಕೊಳ್ಳದೇ ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ಸ್ಟೇ ತಂದಿದ್ದಾರೆ. ಸಿದ್ದರಾಮಯ್ಯನವರಿಗೆ ಅಧಿಕಾರದ ದಾಹ. ಈ ಹಿಂದೆ 65ನೇ ವಯಸ್ಸಿನಲ್ಲಿ ಹೇಳಿಕೊಂಡಿದ್ರು ಇದು ತನ್ನ ಕೊನೆ ಚುನಾವಣೆ ಎಂದು. ಈಗ ಮತ್ತೆ ಚುನಾವಣೆಗೆ ನಿಲ್ಲಲು ಮುಂದಾಗಿದ್ದಾರೆ. ಅವರಿಗೆ ಸ್ಟೇ ಸಿದ್ದರಾಮಯ್ಯ ಎನ್ನಬೇಕು ಎಂದು ಲೇವಡಿ ಮಾಡಿದರು.