ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರಕ್ಷಕರಿಗೂ ಕಳ್ಳರ ಕಾಟದ ಭೀತಿ ಶುರುವಾಗಿದೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಓರ್ವರ ಕಾರಿಗೆ ಕನ್ನ ಹಾಕಿದ ಕಳ್ಳನೊಬ್ಬ ಲ್ಯಾಪ್ ಟಾಪ್, ಹಣ ಕದ್ದು ಪರಾರಿಯಾಗಿದ್ದಾನೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಬಳಿ ನಿಲ್ಲಿಸಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರುಣ್ ಸಾಳುಂಕೆ ಕಾರಿನ ಗಾಜು ಒಡೆದ ಕಳ್ಳ, ಕಾರಿನಲ್ಲಿದ್ದ ಲ್ಯಾಪ್ ಟಾಪ್, ಮೂರು ಪೆನ್ ಡ್ರೈವ್ ಹಾಗೂ 50 ಸಾವಿರ ಹಣ ದೋಚಿ ಪರಾರಿಯಾಗಿದ್ದಾನೆ. ಕಳ್ಳರ ಕೈಚಳಕ ನೋಡಿ ಇನ್ಸ್ ಪೆಕ್ಟರ್ ಶಾಕ್ ಆಗಿದ್ದಾರೆ.
ಮರದ ಕೊಂಬೆ ತಲೆ ಮೇಲೆ ಬಿದ್ದ ಕಾರಣ 701 ದಿನಗಳ ಕಾಲ ಕೋಮಾದಲ್ಲಿದ್ದ ಬಾಲಕಿ ಇನ್ನಿಲ್ಲ
ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಶೋಧ ನಡೆಸಿದ್ದಾರೆ.