ಕೊಪ್ಪಳ: ಉತ್ತರ ಪ್ರದೇಶದ ಲಖಿಂಪುರ ಹಿಂಸಾಚಾರ ಪ್ರಕರಣದ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಮೌನವಾಗಿರುವುದೇಕೆ? ರೈತರ ಮೇಲೆ ಕೇಂದ್ರ ಸಚಿವರ ಮಗ ಕಾರು ಹರಿಸಿ ಸಾಯಿಸಿದ್ದಾನೆ. ಆದರೂ ಬಿಜೆಪಿ ಮುಖಂಡರು ಯಾರೊಬ್ಬರೂ ಮಾತನಾಡುತ್ತಿಲ್ಲ. ಈ ದೇಶದಿಂದಲೇ ಬಿಜೆಪಿ ಸರ್ಕಾರ ತೊಲಗಬೇಕಿದೆ ಇಲ್ಲವಾದಲ್ಲಿ ಯಾರಿಗೂ ನೆಮ್ಮದಿಯಿಲ್ಲ ಎಂದು ಶಾಸಕ ಅಮರೇಗೌಡ ಬಯ್ಯಾಪೂರ ವಾಗ್ದಾಳಿ ನಡೆಸಿದ್ದಾರೆ.
ಅರಿಶಿನ – ಕೆಂಪು ಮೆಣಸಿನ ಪುಡಿ ಕಲಬೆರಕೆ ಆಗಿದೆಯಾ…..? ಹೀಗೆ ಪತ್ತೆ ಹಚ್ಚಿ
ಕೊಪ್ಪಳದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವನ್ನು ಮೊದಲು ತೊಲಗಿಸಬೇಕು.ಇಲ್ಲವಾದರೆ ಈ ದೇಶ ಉದ್ಧಾರವಾಗಲ್ಲ. ಬಿಜೆಪಿ ಚೇಲಾಗಳಾದ ಪೊಲೀಸರು ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿದ್ದಾರೆ. ಅವರ ಮೈಕೈ ಮುಟ್ಟಿ ಬಿಜೆಪಿ ಚೇಲಾಗಳಂತೆ ವರ್ತಿಸಿದ್ದಾರೆ. ದೇಶದಲ್ಲಿ ರೈತರು, ಮಕ್ಕಳು, ಮಹಿಳೆಯರು ಯಾರೊಬ್ಬರೂ ಸುರಕ್ಷಿತವಾಗಿಲ್ಲ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕಿದೆ ಎಂದು ಕಿಡಿಕಾರಿದರು.
ಯುಪಿಯಲ್ಲಿ ಮೃತ ರೈತರಿಗೆ 45 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಬಿಜೆಪಿ ಮುಖಂಡರು ಸತ್ತರೆ ನಾವು ಒಂದು ಕೋಟಿ ಪರಿಹಾರ ನೀಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.