ಬೆಂಗಳೂರು: ಕರ್ನಾಟಕ ಪೊಲೀಸ್ ವ್ಯವಸ್ಥೆ ಚೆನ್ನಾಗಿದೆ. ಆದರೆ ಕಾಂಗ್ರೆಸ್ ನಾಯಕರು ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡುತ್ತಿದ್ದೀರಾ ? ನಮ್ಮ ಸರ್ಕಾರದಲ್ಲಿ ಇದಕ್ಕೆಲ್ಲ ಅವಕಾಶವಿಲ್ಲ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಗ ಜ್ಞಾನೇಂದ್ರ, ಪೊಲೀಸರನ್ನು ಕಾಂಗ್ರೆಸ್ಸೀಕರಣ ಮಾಡುವ ಪ್ರಯತ್ನವನ್ನು ನಿನ್ನೆ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಧರ್ಮ, ಜಾತಿ, ಆಧಾರದ ಮೇಲೆ ಯಾರೂ ಏನು ಮಾಡುವುದಿಲ್ಲ. ನಿನ್ನೆ ಹೀಗೆಯೇ ಇರಬೇಕು. ನಾವು ಹೇಳಿದಂತೆ ಮಾಡಬೇಕು ಅಂತ ಪೊಲೀಸರಿಗೆ ಒಂದು ರೀತಿ ಧಮ್ಕಿ ಹಾಕಿದ್ದಾರೆ. ಇವರು ಕಾನೂನು ಮೀರಿ ಹೇಳಿದವರ ಮೇಲೆ ಕೇಸ್ ಹಾಕಬೇಕು. ಇವರು ಹೇಳಿದವರನ್ನು ಬಿಡಬೇಕು. ಈ ಹಿಂದೆಯೂ ಇವರು ಇದೇ ರೀತಿ ಮಾಡಿದ್ದರು. ಪಿಎಫ್ಐ ಸಂಘಟನೆಯನ್ನು ಸಾಕಿ ಬೃಹದಾಕಾರವಾಗಿ ಬೆಳೆಸಿದರು ಎಂದು ಹೇಳಿದರು.