alex Certify BIG NEWS: ‘ಪೇಸಿಎಂ’ ಅಭಿಯಾನದ ಬೆನ್ನಲ್ಲೇ ಮಹತ್ವದ ತೀರ್ಮಾನ; ಪರವಾನಿಗೆ ಇಲ್ಲದೆ ಪೋಸ್ಟರ್ ಅಂಟಿಸಿದರೆ ಭಾರಿ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಪೇಸಿಎಂ’ ಅಭಿಯಾನದ ಬೆನ್ನಲ್ಲೇ ಮಹತ್ವದ ತೀರ್ಮಾನ; ಪರವಾನಿಗೆ ಇಲ್ಲದೆ ಪೋಸ್ಟರ್ ಅಂಟಿಸಿದರೆ ಭಾರಿ ದಂಡ

ಪ್ರತಿಪಕ್ಷ ಕಾಂಗ್ರೆಸ್ ‘ಪೇಸಿಎಂ’ ಪೋಸ್ಟರ್ ಅಭಿಯಾನ ನಡೆಸುತ್ತಿರುವುದರಿಂದ ಮುಜುಗರಕ್ಕೆ ಸಿಲುಕಿರುವ ಆಡಳಿತರೂಢ ಬಿಜೆಪಿ, ಪೊಲೀಸರಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪೋಸ್ಟರ್ ಅಂಟಿಸಿದ್ದ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ. ಅಲ್ಲದೆ ಕಾಂಗ್ರೆಸ್ ನಾಯಕರ ವಿರುದ್ಧ ಎನ್.ಸಿ.ಆರ್. ದಾಖಲಿಸಲಾಗಿದೆ.

ಇದರ ಮಧ್ಯೆಯೂ ಕಾಂಗ್ರೆಸ್ ತನ್ನ ಪೋಸ್ಟರ್ ಅಭಿಯಾನವನ್ನು ಮುಂದುವರಿಸಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಇದೀಗ ಜಿಲ್ಲಾ ಕೇಂದ್ರಗಳಲ್ಲೂ ಸಹ ಪೋಸ್ಟರ್ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.

ಪರವಾನಗಿ ಇಲ್ಲದೆ ಪೋಸ್ಟರ್ ಅಂಟಿಸಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದರ ಜೊತೆಗೆ ಒಂದು ಸಾವಿರದಿಂದ ಹತ್ತು ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಆಡಳಿತಗಳಿಗೆ ಈ ಕುರಿತಂತೆ ಸೂಚನೆ ರವಾನೆಯಾಗುವ ಸಾಧ್ಯತೆ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...