ಮಲೇಷಿಯಾದ ಸ್ತ್ರೀರೋಗ ತಜ್ಞರಾದ ಜಾನ್ ಟಾಂಗ್ ಇಂಗ್ ಚಿನ್ ಎಂಬವರು ಎರಡೂ ಲಿಂಗದವರು ಬಳಕೆ ಮಾಡಲು ಯೋಗ್ಯವಾದ ಕಾಂಡೋಮ್ ಒಂದನ್ನು ಕಂಡುಹಿಡಿದಿದ್ದಾರೆ. ಪುರುಷ ಹಾಗೂ ಮಹಿಳೆ ಇಬ್ಬರೂ ಬಳಕೆ ಮಾಡಬಹುದಾದ ವಿಶ್ವದ ಮೊದಲ ಕಾಂಡೋಮ್ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕಾಂಡೋಮ್ಗಳು ಪಾರದರ್ಶಕವಾಗಿದ್ದು, ಉತ್ತಮ ರಕ್ಷಣೆಯನ್ನು ಹೊಂದಿದೆ. ಇದನ್ನು ಯಾವುದೇ ಲಿಂಗದವರು ಬಳಕೆ ಮಾಡಬಹುದಾಗಿದೆ. ಜಾನ್ ಟಾಂಗ್ ಇಂಗ್ ಚಿನ್ ಈ ವಂಡಲೀಫ್ ಯುನಿಸೆಕ್ಸ್ ಕಾಂಡೋಮ್ನ್ನು ಕಂಡು ಹಿಡಿದಿದ್ದಾರೆ.
ವೈದ್ಯರು ನೀಡಿದ ಮಾಹಿತಿಯ ಪ್ರಕಾರ, ಈ ಕಾಂಡೋಮ್ ಅನ್ನು ಪಾಲಿಯುರೆಥೇನ್ನಂತಹ ವೈದ್ಯಕೀಯ ವಸ್ತುಗಳನ್ನೇ ಬಳಸಿ ತಯಾರಿಸಲಾಗಿದೆ. ಇದು ಇತರೆ ಕಾಂಡೋಮ್ ಗಳಂತೆಯೇ ಕಾರ್ಯ ನಿರ್ವಹಿಸುತ್ತದೆ. ಆದರೆ ಸಾಮಾನ್ಯ ಕಾಂಡೋಮ್ ಗಳಿಗಿಂತ ಕೊಂಚ ವ್ಯತ್ಯಾಸಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಇದೊಂದು ಸಾಮಾನ್ಯ ಕಾಂಡೋಮ್ ಆಗಿದ್ದು ಆದರೆ ಅಂಟಿಕೊಳ್ಳುವಂತಹ ಹೊದಿಕೆಯನ್ನು ಹೊಂದಿದೆ. ಇದನ್ನು ನೀವು ಶಿಶ್ನ ಅಥವಾ ಯೋನಿ ಯಾವುದಕ್ಕೆ ಬೇಕಿದ್ದರೂ ಅಂಟಿಸಬಹುದಾಗಿದೆ. ಹೆಚ್ಚಿನ ರಕ್ಷಣೆಗಾಗಿ ಇದು ಹೆಚ್ಚುವರಿ ಪ್ರದೇಶವನ್ನು ಆಕ್ರಮಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಪ್ರತಿಯೊಂದು ಬಾಕ್ಸ್ನಲ್ಲಿ ಎರಡು ಕಾಂಡೋಮ್ಗಳು ಇರಲಿದ್ದು, ಅವುಗಳ ಬೆಲೆ 65.14 ರೂಪಾಯಿ ಆಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಜಾನ್ ಟಾಂಗ್ ಇಂಗ್ ಚಿನ್, ಈ ಕಾಂಡೋಮ್ ಗಳನ್ನು ಪೋಲಿಯುರಥೇನ್ಗಳನ್ನು ಬಳಸಿ ತಯಾರಿಸಲಾಗಿದೆ. ಇದು ಸಾಕಷ್ಟು ಪ್ರಾಯೋಗಿಕ ಪರೀಕ್ಷೆಗಳನ್ನು ಎದುರಿಸಿದೆ. ಎಲ್ಲಾ ಪರೀಕ್ಷೆಗಳಲ್ಲಿ ಯಶಸ್ವಿಯಾದ ಬಳಿಕವೇ ಇದನ್ನು ಯುನಿಸೆಕ್ಸ್ ಕಾಂಡೋಮ್ ಎಂದು ಘೋಷಿಸಲಾಗಿದೆ. ಈ ಕಾಂಡೋಮ್ ಡಿಸೆಂಬರ್ ತಿಂಗಳ ವೇಳೆಗೆ ವೆಬ್ಸೈಟ್ಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ ಎಂದು ಹೇಳಿದ್ರು.