alex Certify BIG NEWS: ಪುರಿ ಜಗನ್ನಾಥ ದೇವರ ಹೆಸರಲ್ಲಿದೆ 60 ಸಾವಿರ ಎಕರೆಗೂ ಅಧಿಕ ಭೂಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪುರಿ ಜಗನ್ನಾಥ ದೇವರ ಹೆಸರಲ್ಲಿದೆ 60 ಸಾವಿರ ಎಕರೆಗೂ ಅಧಿಕ ಭೂಮಿ

ಒಡಿಶಾ ಸರ್ಕಾರದ ಅನುಮೋದನೆಯ ನಂತರ ಜಗನ್ನಾಥ ದೇವರ ಹೆಸರಿನಲ್ಲಿರುವ 60,000 ಎಕರೆ ಜಮೀನಿನ ದಾಖಲೆಗಳನ್ನು ಶೀಘ್ರದಲ್ಲೇ ಡಿಜಿಟಲೀಕರಣಗೊಳಿಸಲಾಗುವುದು. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹಾಪ್ರಭು ಜಗನ್ನಾಥ ಬಿಜೆ ಹೆಸರಿನಲ್ಲಿ ಒಡಿಶಾದಲ್ಲಿ 60,426 ಎಕರೆ ಮತ್ತು ಇತರ ಆರು ರಾಜ್ಯಗಳಲ್ಲಿ 395.252 ಎಕರೆ ಭೂಮಿ ಇದೆ. ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಯ ವಿ.ವಿ. ಯಾದವ್ ಅವರು ಗಜಪತಿ ಮಹಾರಾಜ ದಿಬ್ಯಾ ಸಿಂಘಾ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಸಮಿತಿಯ ಸಭೆಯ ನಂತರ ಈ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 322.930 ಎಕರೆ, ಮಹಾರಾಷ್ಟ್ರದಲ್ಲಿ 28.21 ಎಕರೆ, ಮಧ್ಯಪ್ರದೇಶದಲ್ಲಿ 25.11 ಎಕರೆ, ಆಂಧ್ರಪ್ರದೇಶದಲ್ಲಿ 17.02 ಎಕರೆ, ಛತ್ತೀಸ್‌ಗಢದಲ್ಲಿ 1.7 ಎಕರೆ ಮತ್ತು ಬಿಹಾರದಲ್ಲಿ 0.27 ಎಕರೆ ಭೂಮಿ ಜಗನ್ನಾಥ ದೇವರ ಹೆಸರಿನಲ್ಲಿದೆ.

ಭೂ ದಾಖಲೆಗಳ ಡಿಜಿಟಲೀಕರಣದ ಜವಾಬ್ಧಾರಿಯನ್ನು ಒಡಿಶಾ ಬಾಹ್ಯಾಕಾಶ ಕೇಂದ್ರಕ್ಕೆ (ORSAC) ನೀಡಲಾಗುವುದು. ರಾಜ್ಯ ಸರ್ಕಾರದ ಒಪ್ಪಿಗೆ ದೊರೆತ ನಂತರ ಪ್ರಕ್ರಿಯೆ ಆರಂಭವಾಗಲಿದೆ. ಮಕ್ಕಳ ಶಿಕ್ಷಣಕ್ಕಾಗಿ ಶ್ರೀ ಮಂದಿರ ಆದರ್ಶ ಗುರುಕುಲ ಸೊಸೈಟಿ ರಚನೆ ಮತ್ತು ಅವರಿಗೆ ವಸತಿ ಯೋಜನೆ ಕುರಿತು ವ್ಯವಸ್ಥಾಪನಾ ಸಮಿತಿ ಚರ್ಚಿಸಿದೆ. ಬಿರ್ಲಾ ಫೌಂಡೇಶನ್ ನಡೆಸುತ್ತಿರುವ ಸೊಸೈಟಿಯ ನೋಂದಣಿಗಾಗಿ ಅರ್ಜಿಯನ್ನು ಇನ್‌ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್‌ಗೆ ಈಗಾಗ್ಲೇ  ಸಲ್ಲಿಸಲಾಗಿದೆ.

ಈ ಕುರಿತ ಸಂಪೂರ್ಣ ಯೋಜನೆಯ ಬಗ್ಗೆ ಚರ್ಚಿಸಲು ಮುಂದಿನ ವ್ಯವಸ್ಥಾಪನಾ ಸಮಿತಿ ಸಭೆಗೆ ಬಿರ್ಲಾ ಫೌಂಡೇಶನ್‌ ಅನ್ನು ಸಹ ಆಹ್ವಾನಿಸಲಾಗುತ್ತದೆ. ದೇವಸ್ಥಾನದ ರತ್ನ ಭಂಡಾರ ತೆರೆಯುವ ಬೇಡಿಕೆಯನ್ನು ವ್ಯವಸ್ಥಾಪನಾ ಸಮಿತಿ ಕೈಗೆತ್ತಿಕೊಂಡಿಲ್ಲ. ಅದು ಸಭೆಯ ಕಾರ್ಯಸೂಚಿಯಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...