alex Certify BIG NEWS: ಪುಡಿ ರೌಡಿಯಂತೆ ವರ್ತಿಸುವ ಬದಲು ತಾಕತ್ತಿದ್ದರೆ ಸ್ಟ್ಯಾಲಿನ್ ಮನವೊಲಿಸಿ ಸುಪ್ರೀಂ ನಲ್ಲಿ ಸಲ್ಲಿಕೆಯಾದ ದಾಖಲೆ ವಾಪಸ್ ತೆಗೆಸಿ; ಡಿ.ಕೆ.ಶಿ. ಗೆ ಸವಾಲು ಹಾಕಿದ BJP | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪುಡಿ ರೌಡಿಯಂತೆ ವರ್ತಿಸುವ ಬದಲು ತಾಕತ್ತಿದ್ದರೆ ಸ್ಟ್ಯಾಲಿನ್ ಮನವೊಲಿಸಿ ಸುಪ್ರೀಂ ನಲ್ಲಿ ಸಲ್ಲಿಕೆಯಾದ ದಾಖಲೆ ವಾಪಸ್ ತೆಗೆಸಿ; ಡಿ.ಕೆ.ಶಿ. ಗೆ ಸವಾಲು ಹಾಕಿದ BJP

ಬೆಂಗಳೂರು: ಪಾದಯಾತ್ರೆಯನ್ನು ತಡೆಯಲು ರಾಜ್ಯ ಗೃಹ ಸಚಿವರು ಇನ್ನೊಂದು ಜನ್ಮ ಎತ್ತಿ ಬರಬೇಕು, ತಾಕತ್ತಿದ್ದರೆ ತಡೆಯಿರಿ ನೋಡೋಣಾ ಎಂದು ಸವಾಲು ಹಾಕಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ, ಪುಡಿ ರೌಡಿಯಂತೆ ವರ್ತಿಸುವ ಬದಲು ಸುಪ್ರೀಂ ಕೋರ್ಟ್ ನಲ್ಲಿ ತಮಿಳುನಾಡು ಸರ್ಕಾರ ಹೂಡಿರುವ ದಾವೆ ವಾಪಸ್ ತೆಗೆಸಿ ಎಂದು ಗುಡುಗಿದೆ.

ಡಿ.ಕೆ.ಶಿ.ಯವರೇ ನೀವು ರೌಡಿ ಕೊತ್ವಾಲನ ಶಿಷ್ಯ ಎಂಬುದನ್ನು ತೋರಿಸುತ್ತಿದ್ದೀರಾ ? ಮೇಕೆದಾಟು ಯೋಜನೆ ಹೆಸರಲ್ಲಿ ಪಾದಯಾತ್ರೆ ಮೂಲಕ ಸುಳ್ಳಿನ ಜಾತ್ರೆ ಮಾಡುತ್ತಿದ್ದೀರಾ ? ಹತ್ತಾರು ಪ್ರಶ್ನೆ ಎತ್ತುವ ಮೊದಲು ನಮ್ಮ ಒಂದು ಪ್ರಶ್ನೆಗೆ ಉತ್ತರಿಸಿ. ಮೇಕೆದಾಟು ಯೋಜನೆಗೆ ತಡೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಯಾರು ? ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.

ಮೇಕೆದಾಟು ಯೋಜನೆ ತಡೆ ಕೋರಿ ಯಾರು ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದಾರೋ ಆ ಸರ್ಕಾರದೊಂದಿಗೆ ತಮಿಳುನಾಡಿನಲ್ಲಿ ಕಾಂಗ್ರೆಸ್ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಮೈತ್ರಿಯಲ್ಲಿದೆ. ಸೋನಿಯಾ ಗಾಂಧಿ ಕುಮ್ಮಕ್ಕಿನಿಂದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಡಿಎಂಕೆ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವಾಗ ಯೋಜನೆಗಾಗಿ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವುದು ಯಾರ ವಿರುದ್ಧ ? ಎಂದು ಕಿಡಿಕಾರಿದೆ.

ಡಿಕೆಶಿಯವರೇ ಮೇಕೆದಾಟು ಈಗ ಸ್ಟ್ಯಾಲಿನ್ ಅಂಗಳದಲ್ಲಿದೆ. ನೀವು ಸುಳ್ಳಿನ ಜಾತ್ರೆ ಮಾಡುವ ಬದಲು ಅವರೊಂದಿಗೆ ಮಾತುಕತೆ ನಡೆಸಿ. ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕುವುದು ಬೇಡ. ಪ್ರಧಾನಿ ಮೋದಿಯೋ, ರಾಹುಲ್ ಗಾಂಧಿಯೋ ಎಂದು ಸಿದ್ದರಾಮಯ್ಯ ಪ್ರಶ್ನಿಸುವುದೂ ಬೇಡ. ನೀವಿಬ್ಬರೂ ಸೇರಿ ಸ್ಟ್ಯಾಲಿನ್ ಮನವೊಲಿಸಿ ಸುಪ್ರೀಂ ನಲ್ಲಿ ಸಲ್ಲಿಸಿರುವ ದಾವೆ ವಾಪಸ್ ತೆಗೆಸಿ ನಿಮ್ಮ ತಾಕತ್ತು ಅಲ್ಲಿ ಪ್ರದರ್ಶಿಸಿ ಎಂದು ಮರುಸವಾಲು ಹಾಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...