ಬಳ್ಳಾರಿ: ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಇಂಗ್ಲೀಷ್ ಪ್ರೊ.ಡಾ.ಚಾಂದ್ ಭಾಷ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಬಳ್ಳಾರಿಯ ವಿಜಯನಗರದ ಶ್ರೀಕೃಷ್ಣ ದೆವರಾಯ ವಿಶ್ವ ವಿದ್ಯಾಲಯದ ಇಂಗ್ಲೀಷ್ ಪ್ರೊಫೆಸರ್ ಡಾ.ಚಾಂದ್ ಭಾಷ ಅವರನ್ನು ಸಸ್ಪೆಂಡ್ ಮಾಡಿ ರಿಜಿಸ್ಟರ್ ಆದೇಶ ಹೊರಡಿಸಿದ್ದಾರೆ.
ಪ್ರೊ.ಚಾಂದ್ ಭಾಷಾ ತನಗೆ ಲೈಂಗಿಕ ಕಿರುಕುಳ ನಿಡುತ್ತಿರುವುದಾಗಿ ಸಂಶೋಧನಾ ವಿದ್ಯಾರ್ಥಿನಿ ನವೆಂಬರ್ 7ರಂದು ಲಿಖಿತ ದೂರು ನೀಡಿದ್ದರು. ವಿದ್ಯಾರ್ಥಿನಿ ದೂರಿನ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಸಿಂಡಿಕೇಟ್ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪ್ರೊಫೇಸರ್ ಚಾಂದ್ ಭಾಷ ಅವರನ್ನು ಅಮಾನತುಗೊಳಿಸಲಾಗಿದೆ.