ಬೆಂಗಳೂರು: ಪಿ ಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಿಡಿಗಡೆ ಮಾಡಿರುವ ಆಡಿಯೋ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಇಷ್ಟು ದಿನ ಆಡಿಯೋ ಸಾಕ್ಷ್ಯ ತಮ್ಮ ಬಳಿಯೇ ಇಟ್ಟುಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಪಿ ಎಸ್ ಐ ಅಕ್ರಮ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಇಷ್ಟು ದಿನ ಯಾಕೆ ಆಡಿಯೋ ಬಿಡುಗಡೆ ಮಾಡಲಿಲ್ಲ? ಈಗ ತಮ್ಮ ಆಪ್ತನ ಬಂಧನವಾಗುತ್ತಿದ್ದಂತೆ ಆಡಿಯೋ ಬಿಡುಗಡೆ ಮಾಡಿದ್ದಾರೆ. ಮೊದಲೇ ಬಿಡಿಗಡೆಮಾಡಬಹುದಿತ್ತಲ್ಲ ಎಂದಿದ್ದಾರೆ.
ಈಗಲಾದರೂ ಪ್ರಿಯಾಂಕ್ ಖರ್ಗೆ ಆಡಿಯೋ ಸಾಕ್ಷ್ಯವನ್ನು ಸಿಐಡಿಗೆ ನೀಡಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಸಹಕರಿಸಲಿ. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದು ಹೇಳಿದರು.
‘ಶನಿವಾರ’ ಅಪ್ಪಿತಪ್ಪಿಯೂ ಇದನ್ನು ಸೇವಿಸಬೇಡಿ
ಪಿ ಎಸ್ ಐ ಹುದ್ದೆಯಿಂದ ವಂಚಿತರಾದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕು ಎಂಬ ಉದ್ದೇಶಕ್ಕೆ ನಾನೇ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಆದೇಶ ನೀಡಿದ್ದೆ. ಈ ಬಗ್ಗೆ ಸಿಎಂ ಜತೆಯೂ ಮಾತನಾಡಿದ್ದೆ. ಆ ನಂತರ ಖರ್ಗೆಯವರು ಸುದ್ದಿಗೋಷ್ಠಿ ನಡೆಸಿದ್ದರು. ಅಂದು ಆಡಿಯೋ ರೆಕಾರ್ಡ್ ಬಗ್ಗೆ ಯಾವುದೇ ಮಾಹಿತಿ ನೀಡದೇ ಈಗ ಆಪ್ತರ ಬಂಧನವಾಗುತ್ತಿದ್ದಂತೆ ಆಡಿಯೋ ಬಿಡಿಗಡೆ ಮಾಡಿದ್ದಾರೆ. ತಪ್ಪಿತಸ್ಥರು ಯಾರೇ ಆಗಿರಲಿ ಶಿಕ್ಷೆ ನಿಶ್ಚಿತ ಎಂದು ಹೇಳಿದರು.