ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 90 ದಿನಗಳೊಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು. ಆ ನಿಟ್ಟಿನಲ್ಲಿ ಶೀಘ್ರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಡಿಜಿ-ಐಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.
545 ಪಿಎಸ್ಐ ಹುದ್ದೆ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಕ್ಟೋಬರ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗುವುದು. ಪ್ರಕರಣದ ಯಾವುದೇ ಅಪರಾಧಿ ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ 90 ದಿನಗಳ ಕಾಲ ಕಾಲವಾಕಾಶವಿದೆ. ಹಾಗಾಗಿ ಅಲ್ಲಿಯವರೆಗೆ ಕಾಯಲೇಬೇಕು. ಅಕ್ಟೋಬರ್ ನಲ್ಲಿ ದೋಷಾರೋಪ ಪಟ್ಟಿ ಕೋರ್ಟ್ ಗೆ ಸಲ್ಲಿಸಲಾಗುವುದು ಎಂದರು.
ಅಕ್ಟೋಬರ್ ನಲ್ಲಿ ಎಲ್ಲಾ ಕೇಸ್ ಗಳ ಚಾರ್ಜ್ ಶೀಟ್ ಆಗಲಿದ್ದು, ಆ ಬಳಿಕವಷ್ಟೇ ಮರು ಪರೀಕ್ಷೆ ದಿನಾಂಕ ಘೋಷಿಸಲಾಗುವುದು. ಅಲ್ಲಿಯವರೆಗೆ ಪಿಎಸ್ಐ ಹುದ್ದೆಗೆ ಯಾವುದೇ ಮರು ಪರೀಕ್ಷೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.