ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಭಾವಿ ಸಚಿವರು ಬೇರಾರೂ ಅಲ್ಲ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಎಂದು ಕಾಂಗ್ರೆಸ್ ನಾಯಕರು ನೇರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸದ ವಿ.ಎಸ್. ಉಗ್ರಪ್ಪ, ಪಿಎಸ್ಐ ಹುದ್ದೆ ಅಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಭಾಗಿಯಾಗಿದ್ದಾರೆ. ಅಭ್ಯರ್ಥಿಯಿಂದ ಹಣ ಪಡೆದವರು ಅಶ್ವತ್ಥನಾರಾಯಣ ಅವರ ತಮ್ಮ ಸತೀಶ್. ಸಚಿವರ ಸಹೋದರನೆ ಡೀಲ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಜರ್ಮನಿಯಲ್ಲಿ ಭಾರತೀಯ ಮೂಲದ ಬಾಲಕನ ದೇಶಭಕ್ತಿ ಗೀತೆಗೆ ತಲೆದೂಗಿದ ಪ್ರಧಾನಿ ಮೋದಿ; ವಿಡಿಯೋ ವೈರಲ್
ದರ್ಶನ್ ಗೌಡ ಆಯ್ಕೆ ಹಿಂದೆ ಸಚಿವರ ಸಹೋದರ ಸತೀಶ್ ಕೈವಾಡವಿದೆ. ಸಿಐಡಿ ಅಧಿಕಾರಿಗಳು ವಿಚಾರಣೆಗೆ ಬಂದಾಗ ಸ್ವತಃ ಸಚಿವರೇ ಅಧಿಕಾರಿಗಳನ್ನು ತಡೆದಿದ್ದಾರೆ. ಕೂಡಲೇ ಸಚಿವ ಅಶ್ವತ್ಥನಾರಾಯಣ ರಾಜೀನಾಮೆ ನೀಡಲಿ. ಪ್ರಧಾನಿ ಮೋದಿಯವರು ಸಚಿವರ ರಾಜೀನಾಮೆ ಪಡೆದುಕೊಳ್ಳಲಿ ಎಂದು ಆಗ್ರಹಿಸಿದರು.