alex Certify BIG NEWS: ಪಿಎಸ್ಐ ಪತಿ ವಿರುದ್ಧ ಪತ್ನಿ ಎಫ್ಐಆರ್ ದಾಖಲು; ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಿಎಸ್ಐ ಪತಿ ವಿರುದ್ಧ ಪತ್ನಿ ಎಫ್ಐಆರ್ ದಾಖಲು; ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿದ ಪೊಲೀಸ್

ದೇವನಹಳ್ಳಿ: ಮಹಿಳೆಯೊಬ್ಬರು ಪಿಎಸ್ಐ ಪತಿ ವಿರುದ್ಧ ವಂಚನೆ, ಕಿರುಕುಳ ಆರೋಪ ಮಾಡಿದ್ದು, ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ರಮೇಶ್ ಗೂಗರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪಿಎಸ್ಐ ರಮೇಶ್ ಪತ್ನಿ, ರಾಶಿ, ಸುಳ್ಳು ತಂದೆ ತಾಯಿಯನ್ನು ಸೃಷ್ಟಿಸಿ, ತನ್ನನ್ನು ರಿಜಿಸ್ಟರ್ ವಿವಾಹವಾಗಿರುವ ಪತಿ ರಮೇಶ್ ಬಳಿಕ ಬೇರೊಂದು ವಿವಾಹವಾಗಿ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆ. ತನಗೆ ವಂಚಿಸಿದ್ದಲ್ಲದೇ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೇಸ್ ದಾಖಲಿಸಿದ್ದಾರೆ.

ಪತ್ನಿ ದೂರು ದಾಖಲಿಸುತ್ತಿದ್ದಂತೆ ಅತ್ತ ರಮೇಶ್ ಕೂಡ ಪತ್ನಿ ರಾಶಿ ವಿರುದ್ಧ ದೂರು ನೀಡಿದ್ದಾರೆ. ತಾನು ರಾಶಿಯನ್ನು ಪ್ರೀತಿಸಿ ವಿವಾಹವಾಗಿದ್ದೆ. ಆದರೆ ಮದುವೆಯಾದ ನಂತರ ನನಗೆ ಊರಿಗೆ ಹೋಗಲು, ತಂದೆ ತಾಯಿ ನೋಡಲು ಬಿಡದೆ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಿದ್ದಾರೆ.

ಪತಿ-ಪತ್ನಿ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡು ದೂರು ದಾಖಲಿಸಿದ್ದಾರೆ. ಇಬ್ಬರ ನಡುವೆ ಕಳೆದ ಒಂದು ವರ್ಷದಿಂದ ಜಗಳ ನಡೆಯುತ್ತಿತ್ತು. ಹಲವು ಬಾರಿ ಪೊಲೀಸರು ರಾಜಿ ಮಾಡಿಸಿದ್ದರು. ಸಂಧಾನದ ಬಳಿಕವೂ ಪಿಎಸ್ಐ ರಮೇಶ್ ಬೇರೆ ಯುವತಿಯರೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡು ಕಿರುಕುಳ ನೀಡಿತ್ತಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾಳೆ . ನ್ಯಾಯಕ್ಕಾಗಿ ಪಿಎಸ್ಐ ಪತ್ನಿ ಎಸ್ ಪಿ ಕಚೇರಿ ಮೆಟ್ಟಿಲೇರಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...