ಶಿವಮೊಗ್ಗ: ಪಿಂಪ್ ಗಳಿಂದ ಹಣ ಮಾಡಿಕಿಳ್ಳುವ ಸ್ಥಿತಿ ಬಂದರೆ ಆತಹತ್ಯೆ ಮಾಡಿಕೊಳ್ಳುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ, ಸ್ಯಾಂಟ್ರೋ ರವಿ ಯಾರೆಂಬುದೇ ನನಗೆ ಗೊತ್ತಿಲ್ಲ. ನನ್ನ ಮನೆಗೆ ಸಾವಿರಾರು ಜನರು ಬಂದು ಹೋಗ್ತಾರೆ. ಎಲ್ಲರ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೋಡಿ ಒಳಗೆ ಬಿಡಲು ಆಗಲ್ಲ. ವಿನಾಕಾರಣ ನನ್ನ ಹೆಸರು ಹೇಳಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಗೃಹ ಸಚಿವರು ಗುಜರಾತ್ ಗೆ ಹೋಗಿದ್ದಾಗಲೇ ಗುಜರಾತ್ ನಲ್ಲಿಯೇ ಸ್ಯಾಂಟ್ರೋ ರವಿ ಬಂಧನ ಅನುಮಾನ ತಂದಿದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾಸ್ವಾಮಿ ಹೇಳಿಕೆಗೆ ಕಿಡಿಕಾರಿರುವ ಗೃಹ ಸಚಿವರು, ಗುಜರಾತ್ ನಲ್ಲಿ ನನ್ನ ಕಾರ್ಯಕ್ರಮ 6 ತಿಂಗಳ ಹಿಂದೆ ನಿಗದಿಯಾಗಿತ್ತು. ನಾನು ಎಲ್ಲಿಗೆ ಹೋಗಿದ್ದೆ ಎಂಬ ಬಗ್ಗೆ ,ಮಾಹಿತಿ ಸರ್ಕಾರದ ಬಳಿ ಇರುತ್ತದೆ. ಕುಮಾರಸ್ವಾಮಿಯವರ ಆರೋಪದಲ್ಲಿ ಹುರುಳಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.