ವಿದೇಶ ಪ್ರಯಾಣ ಕೈಗೊಳ್ಳಬೇಕೆಂದರೆ ಪಾಸ್ಪೋರ್ಟ್ ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ. ಮೊದಲು ಈ ಕೆಲಸ ಬಾರಿ ವಿಳಂಬವಾಗುತ್ತಿತ್ತು. ಬಳಿಕ ಒಂದಷ್ಟು ಸುಧಾರಣೆಗಳನ್ನು ಕೈಗೊಂಡಿದ್ದು, ಪಾಸ್ಪೋರ್ಟ್ ಪಡೆಯುವವರಿಗೆ ಅನುಕೂಲವಾಗಿತ್ತು.
ಪಾಸ್ ಪೋರ್ಟ್ ಪಡೆಯಲು ಪೊಲೀಸ್ ವೆರಿಫಿಕೇಶನ್ ಅಗತ್ಯವಿದ್ದು, ಇದು 15 ದಿನಗಳ ಕಾಲ ತೆಗೆದುಕೊಳ್ಳುವ ಕಾರಣ ವಿಳಂಬವಾಗುತ್ತಿತ್ತು. ಇದೀಗ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ.
ಮೊಬೈಲ್ ಆಪ್ ಮೂಲಕ ಕೇವಲ ಐದು ದಿನಗಳಲ್ಲಿ ಪೊಲೀಸ್ ವೆರಿಫಿಕೇಶನ್ ಪೂರ್ಣಗೊಳ್ಳಲಿದ್ದು ಇದಕ್ಕಾಗಿ ‘ಎಂ ಪಾಸ್ಪೋರ್ಟ್ ಪೊಲೀಸ್ ಆಪ್’ ಎಂಬ ತಂತ್ರಾಂಶವನ್ನು ರಚಿಸಲಾಗಿದೆ. ಆರಂಭಿಕ ಹಂತದಲ್ಲಿ ದೆಹಲಿಯಲ್ಲಿ ಮಾತ್ರ ಇದು ಆರಂಭವಾಗುತ್ತಿದ್ದು, ಬಳಿಕ ದೇಶದಾದ್ಯಂತ ವಿಸ್ತರಿಸಲಾಗುತ್ತದೆ.