ಶಿವಮೊಗ್ಗ: ಅಖಂಡ ಭಾರತವನ್ನು ಇಬ್ಭಾಗ ಮಾಡಿದ್ದೇ ಕಾಂಗ್ರೆಸ್. ಈಗ ಅಖಂಡ ಭಾರತಕ್ಕಾಗಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಅಖಂಡ ಭಾರತ ಇಬ್ಭಾಗ ಮಾಡಿದ ಪಾಪದ ಪ್ರಜ್ಞೆ ಈಗ ಕಾಂಗ್ರೆಸ್ ಗೆ ಕಾಡಲು ಆರಂಭಿಸಿದೆ. ಹಾಗಾಗಿ ಪಾಪದ ಪ್ರಾಯಶ್ಚಿತ್ತಕ್ಕಾಗಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಭಾರತ್ ಜೋಡೋ ಹೆಸರಲ್ಲಿ ಯಾತ್ರೆ ನಿಜಕ್ಕೂ ಸಂತೋಷ ಎಂದರು.
ಅಂದು ಅಖಂಡ ಭಾರತವನ್ನು ಒಡೆದು ಪಾಕಿಸ್ತಾನ, ಬಾಂಗ್ಲಾದೇಶ ಮಾಡಿ ಪಾಪ ಕಟ್ಟಿಕೊಂಡರು. ಹಾಗಾಗಿ ಈಗ ರಾಹುಲ್ ಗಾಂಧಿ ಅಖಂಡ ಭಾರತ ನಿರ್ಮಾಣಕ್ಕೆ ಹೊರಟಿದ್ದಾರೆ. ಪಾಕ್, ಬಾಂಗ್ಲಾದೇಶ ವಾಪಸ್ ತರುತ್ತೇನೆ ಎಂದು ರಾಹುಲ್ ಹೇಳಲಿ. ಆಗ ಇಡೀ ದೇಶದ ಜನ ರಾಹುಲ್ ಗಾಂಧಿಯನ್ನು ಮೆಚ್ಚುತ್ತಾರೆ ಎಂದು ಹೇಳಿದರು.