ಶಿವಮೊಗ್ಗ: ಪರೇಶ್ ಹತ್ಯೆ ಪ್ರಕರಣವನ್ನು ಸಿಬಿಐ ಮರು ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.
ಪರೇಶ್ ಮೇಸ್ತ ಸಾವು ಸಹಜ ಸಾವಲ್ಲ ಎಂಬುದು ಆತನ ತಂದೆ ಹಾಗೂ ಹಿಂದೂಪರ ಸಂಘಟನೆಗಳ ವಾದ. ಸಿಬಿಐ ಈಗ ನೀಡಿರುವ ತನಿಖಾ ವರದಿ ತೃಪ್ತಿಕರವಾಗಿಲ್ಲ ಎಂದು ಪರೇಶ್ ತಂದೆ ಕೂಡ ಹೇಳುತ್ತಿದ್ದಾರೆ. ಅಲ್ಲದೇ ತನ್ನ ಮಗನದ್ದು ಕೊಲೆ ಹೊರತು ಆಕಸ್ಮಿಕ ಸಾವಲ್ಲ ಎಂದು ಹೇಳುತ್ತಿದ್ದೆ. ಈ ನಿಟ್ಟಿನಲ್ಲಿ ಪ್ರಕರಣದ ಬಗ್ಗೆ ಮರು ತನಿಖೆಯಾಗಲಿ ಎಂದು ಹೇಳಿದರು.
ಪರೇಶ್ ಮೇಸ್ತ ಕುಟುಂಬದವರು ಮರುತನಿಖೆಗೆ ಒತ್ತಾಯಿಸುತ್ತಿದ್ದಾರೆ. ನಾನೂ ಕೂಡ ಪ್ರಕರಣದ ಮರುತನಿಖೆಯಾಗಲಿ ಎಂದು ಹೇಳುತ್ತೇನೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಮರುತನಿಖೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ, ಪರೇಶ್ ಮೇಸ್ತ ಹತ್ಯೆ ಪ್ರಕರಣದ ಮರು ತನಿಖೆಗೆ ಕುಟುಂಬದವರು ಒತ್ತಾಯಿಸುವುದಾದರೆ ಅವರ ಬೆಂಬಲಕ್ಕೆ ಬಿಜೆಪಿ ಸದಾ ಇರುತ್ತದೆ. ಪ್ರಕರಣದ ಮರುತನಿಖೆಯಾಗಲಿ ಎಂದು ಹೇಳಿದ್ದಾರೆ.