ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರ ಪ್ರತಿಧ್ವನಿಸಿದ್ದು ಪ್ರಭಾವಿಗಳ ಕೈಯಲ್ಲೇ ಗಣಿಗಾರಿಕೆ ಅಡಗಿದೆ. ಇದರಿಂದಾಗಿಯೇ ಅಕ್ರಮ ಕಲ್ಲುಗಣಿಗಾರಿಕೆ ಹೆಚ್ಚುತ್ತಿದೆ ಎಂದು ಜೆಡಿಎಸ್ ಶಾಸಕ ಭೋಜೇಗೌಡ ವಿಚಾರ ಪ್ರಸ್ತಾಪಿಸಿದರು.
ಪ್ರಭಾವಿಗಳೇ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಪರವಾನಗಿ ಮಂಜೂರಾತಿಯಲ್ಲಿಯೂ ಪ್ರಭಾವಿಗಳಿಗೊಂದು ನ್ಯಾಯ, ಸಾಮಾನ್ಯರಿಗೊಂದು ನ್ಯಾಯ ಎನ್ನುವಂತಾಗಿದೆ. ಅನ್ ಸೇವ್ಡ್ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿಲ್ಲ ಹೀಗಾಗಿ ಅಕ್ರಮ ಗಣಿಗಾರಿಕೆ ಹೆಚ್ಚಿದೆ. ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ನಷ್ಟವಾಗಿದೆ ಎಂದರು.
‘ಗೃಹ ಸಾಲ’ಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮಗಿದು ತಿಳಿದಿರಲಿ
ಭೋಜೇಗೌಡ ಹೇಳಿಕೆಗೆ ಉತ್ತರಿಸಿದ ಸಚಿವ ಹಾಲಪ್ಪ ಆಚಾರ್, ರಾಜ್ಯದಲ್ಲಿ ಪರವಾನಿಗೆ ಇಲ್ಲದೇ ನಡೆಸುತ್ತಿದ್ದ ಕಲ್ಲು ಗಣಿಗಾರಿಕೆ ಕೇಸ್ ಪತ್ತೆಯಾಗಿದೆ. ಕಳೆದ 3 ವರ್ಷಗಳಲ್ಲಿ 340 ಅಕ್ರಮ ಗಣಿಗಾರಿಕೆ ಕೇಸ್ ಪತ್ತೆಯಾಗಿದೆ. 47 ಪ್ರಕರಣಗಳಲ್ಲಿ ಮಾತ್ರ ಕೇಸ್ ದಾಖಲಿಸಲಾಗಿದೆ. 293 ಅಕ್ರಮಕಲ್ಲು ಗಣಿಗಾರಿಕೆಗಳಿಂದ ದಂಡ ವಸೂಲಿ ಮಾಡಲಾಗಿದ್ದು, 1.55 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.