ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿಯಲ್ಲಿ ಬಿಜೆಪಿ ಸೋಲನುಭವಿಸಿರುವುದು ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಸ್ವಪಕ್ಷದ ಶಾಸಕ ತಮ್ಮ ಸಹೋದರನ ಪರವಾಗಿ ಪಕ್ಷೇತರ ಅಸ್ತ್ರ ಪ್ರಯೋಗಿಸಿದ್ದೇ ಬಿಜೆಪಿ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ನಿರಾಕರಿಸಿರುವ ರಮೇಶ್ ಜಾರಕಿಹೊಳಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಸೋಲಿಸಲೆಂದು ನಾನು ಹಠಕ್ಕೆ ಬಿದ್ದಿದ್ದು ನಿಜ. ಆದರೆ ಬಿಜೆಪಿ ಸೋಲಿಗೆ ನಾನು ಕಾರಣವಲ್ಲ. ನಾನು ಪಕ್ಷಕ್ಕಾಗಿಯೇ ಕೆಲಸ ಮಾಡಿದ್ದೇನೆ. ಆದರೆ ಬಿಜೆಪಿ ಸೋಲಿನ ಹೊಣೆ ನನ್ನ ಮೇಲೆ ಹೇರುವ ಯತ್ನ ನಡೆಯುತ್ತಿದೆ. ನಾನು ಗುಡ್ಡದಂತೆ ಗಟ್ಟಿ ಎಂದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಹೇಳುತ್ತೇನೆ ಎಂದರು.
ಮನೆ ಹೊರಗೆ ಖಾಲಿ ರಟ್ಟಿನ ಬಾಕ್ಸ್ ಇಟ್ಟಿದ್ದ ವೃದ್ಧೆಗೆ 40,000 ರೂ. ದಂಡ..!
ವಿಧಾನ ಪರಿಷತ್ ಚುನಾವಣೆಗೂ ಮುನ್ನ ಕೆಲ ರಾಜಕೀಯ ವಿದ್ಯಮಾನಗಳು ನಡೆದಿದೆ. ಕೊನೇ 4 ದಿನಗಳಲ್ಲಿ ಸಾಕಷ್ಟು ರಾಜಕೀಯ ಬದಲಾವಣೆಗಳು ನಡೆದಿವೆ. ಪಕ್ಷದ ಜೊತೆ ಆಂತರಿಕವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಎಲ್ಲವನ್ನೂ ವಿವರಿಸುತ್ತೇನೆ ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯ ಓರ್ವ ವೇಸ್ಟ್ ಬಾಡಿ, ಅವರಿಗೆ ಭಯ ಶುರುವಾಗಿದೆ. ಅವರ ಬಗ್ಗೆ ಈಗ ಮಾತನಾಡಿ ಪ್ರಯೋಜನವಿಲ್ಲ ಎಂದು ಹೇಳಿದರು.