alex Certify BIG NEWS: ಪದ್ಮಶ್ರೀ ಕೇವಲ ಗೌರವ, ಆದರೆ ಅಪ್ಪು ಯಾವತ್ತಿಗೂ ಅಮರಶ್ರೀ ಎಂದ ಶಿವಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪದ್ಮಶ್ರೀ ಕೇವಲ ಗೌರವ, ಆದರೆ ಅಪ್ಪು ಯಾವತ್ತಿಗೂ ಅಮರಶ್ರೀ ಎಂದ ಶಿವಣ್ಣ

ಬೆಂಗಳೂರು: ದಿ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಗೌರವದ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ಪದ್ಮಶ್ರೀ ಕೇವಲ ಗೌರವ, ಅಪ್ಪು ಯಾವತ್ತಿಗೂ ಅಮರಶ್ರೀ. ಅಪ್ಪು ಎಲ್ಲಾ ಅಭಿಮಾನಿಗಳಲ್ಲಿ ಇದ್ದಾನೆ, ಅಭಿಮಾನಿಗಳಲ್ಲೇ ಅವನನ್ನು ಕಾಣುತ್ತೇವೆ ಎಂದು ಹೇಳಿದರು.

ಇಂದು ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಕಾರ್ಯ ನಡೆಯುತ್ತಿದ್ದು, ಡಾ.ರಾಜ್ ಕುಮಾರ್ ಕುಟುಂಬದವರು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಇರುವ ಪುನೀತ್ ಸಮಾಧಿ ಬಳಿ ಆಗಮಿಸಿ ಕಾರ್ಯ ನೆರವೇರಿಸಿದರು. ಬಳಿಕ ಮಾತನಾಡಿದ ಶಿವಣ್ಣ, ಪುನೀತ್ ಗೆ 11ನೇ ದಿನದ ಕಾರ್ಯ, ಇದನ್ನೆಲ್ಲ ಮಾಡಬೇಕೆಂದರೆ ತುಂಬಾ ನೋವಾಗುತ್ತದೆ ಎಂದು ಭಾವುಕರಾದರು.

ಮನೆಯಲ್ಲಿ ಮಾಡುವ ಸಣ್ಣ ʼಉಪಾಯʼ ಹೆಚ್ಚಿಸುತ್ತೆ ಆಯಸ್ಸು

ಇಂದು ಮನೆಯಲ್ಲಿಯೂ 11ನೇ ದಿನದ ಕಾರ್ಯ ನಡೆಯಲಿದೆ. ನಾಳೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಅಪ್ಪುಗೆ ಹೀಗೆಲ್ಲ ಮಾಡಬೇಕೆ ಎಂಬ ನೋವು ನಮ್ಮೆಲ್ಲರನ್ನು ಕಾಡುತ್ತಿದೆ. ಅಭಿಮಾನಿಗಳಲ್ಲೇ ಅಪ್ಪು ಇದ್ದಾನೆ ಎಂದು ಭಾವಿಸುತ್ತೇವೆ ಎಂದರು.

ಯಾರೂ ಕೂಡ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಮಾಡಬೇಡಿ. ಹಾಗೆಲ್ಲ ನಡೆದುಕೊಂಡರೆ ಅಪ್ಪುಗೂ ನೋವಾಗುತ್ತದೆ. ಅಪ್ಪು ನಮ್ಮ ಜೊತೆಯೇ ಇದ್ದಾನೆ ಎಂದು ಜೀವನ ಮಾಡಿ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...