ಸಚಿವ ಆರ್. ಅಶೋಕ್ ಅವರನ್ನು ಪದ್ಮನಾಭ ನಗರದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಣಕ್ಕಿಳಿಯುತ್ತಿರುವ ಕನಕಪುರ ವಿಧಾನಸಭಾ ಕ್ಷೇತ್ರದಲ್ಲೂ ಅಭ್ಯರ್ಥಿಯನ್ನಾಗಿ ಮಾಡಲಾಗಿದ್ದು, ಇದಕ್ಕೆ ತಿರುಗೇಟು ನೀಡಲು ಪದ್ಮನಾಭನಗರದಲ್ಲಿ ಡಿಕೆಶಿ ಸಹೋದರ ಡಿ.ಕೆ. ಸುರೇಶ್ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು.
ಆದರೆ ಈ ಕುರಿತಂತೆ ಬೆಂಗಳೂರಿನಲ್ಲಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪದ್ಮನಾಭನಗರದ ಅಭ್ಯರ್ಥಿಯನ್ನು ಬದಲಿಸುವುದಿಲ್ಲ. ರಘುನಾಥ್ ನಾಯ್ಡು ಅವರೇ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಆರ್. ಅಶೋಕ್ ಕನಕಪುರದ ಜೊತೆಗೆ ಪದ್ಮನಾಭ ನಗರದಲ್ಲೂ ಸೋಲುತ್ತಾರೆ ಎಂದು ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
ನಾನು ಈ ಹಿಂದೆ ಹೆಚ್.ಡಿ. ದೇವೇಗೌಡ, ಕುಮಾರಸ್ವಾಮಿ ಅವರಂತಹ ನಾಯಕರ ವಿರುದ್ಧ ಚುನಾವಣೆ ಎದುರಿಸಿದ್ದೇನೆ. ಆರ್. ಅಶೋಕ್, ಕನಕಪುರದಲ್ಲಾದರೂ ನಿಲ್ಲಲಿ. ಬೇರೆಲ್ಲಾದರೂ ನಿಲ್ಲಲಿ ನನಗೇನು ತೊಂದರೆ ಇಲ್ಲ ಎಂದು ಹೇಳಿದರು.