ಸಶಸ್ತ್ರ ಪಡೆಗಳಿಗೆ ತ್ವರಿತ ನೇಮಕಾತಿ ಮಾಡಿಕೊಳ್ಳುವ ಯೋಜನೆಯಾದ ಅಗ್ನಪಥ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿದೆ. 5-6 ದಿನಗಳ ಹಿಂದೆ ಆರಂಭವಾಗಿದ್ದ ಈ ಪ್ರತಿಭಟನೆ ಬಿಹಾರದ ಹಲವು ಕಡೆ ಈಗಲೂ ಮುಂದುವರೆದುಕೊಂಡು ಹೋಗುತ್ತಿದೆ. ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರ್ ಮತ್ತು ಯುಪಿ ಧಗಧಗ ಹೊತ್ತಿ ಉರಿಯುತ್ತಿದೆ.
ಬಿಹಾರ್ ಸರ್ಕಾರ ಈ ಪ್ರತಿಭಟನೆಯನ್ನ ಕಂಟ್ರೋಲ್ ಮಾಡುವುದಕ್ಕೆ ಹರಸಾಹಸ ಪಡ್ತಿದೆ. ದಿನದಿಂದ ದಿನಕ್ಕೆ ತೀವ್ರರೂಪ ಪಡೆಯುತ್ತಿರೋ ಈ ಪ್ರತಿಭಟನೆಯಿಂದಾಗಿ ನೂರಾರು ಜನ ಗಾಯಗೊಂಡಿದ್ದಾರೆ. ಈಗಾಗಲೇ ಬಿಹಾರ್ ಸರ್ಕಾರ 15 ಜಿಲ್ಲೆಗಳ ಇಂಟರ್ನೆಟ್ ಸೇವೆಯನ್ನ ಸ್ಥಗಿತಗೊಳಿಸಿದೆ.
BIG NEWS: ರಾಜ್ಯಕ್ಕೂ ವ್ಯಾಪಿಸಿದ ‘ಅಗ್ನಿಪಥ್’ ಕಿಡಿ; ಸೇನಾಕಾಂಕ್ಷಿ ಯುವಕರಿಂದ ಭುಗಿಲೆದ್ದ ಪ್ರತಿಭಟನೆ; ಧಾರವಾಡದಲ್ಲಿ ಲಾಠಿ ಪ್ರಹಾರ
ಬಿಹಾರ್‌ನಲ್ಲಿ ಪ್ರತಿಭಟನಾಕಾರರದಿಂದ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸ್ತಾ ಇದೆ. ಇಲ್ಲಿನ ಚಿತ್ರಣವನ್ನ ಜಗತ್ತಿನ ಮುಂದೆ ಮಾಧ್ಯಮಗಳು ಇಡುತ್ತಿದೆ. ಅದರಲ್ಲಿ ‘ಆಜ್‌ತಕ್‘‘ ಅನ್ನೊ ಖಾಸಗಿ ಸುದ್ದಿವಾಹಿನಿ ಕೂಡಾ ಒಂದು. ಇಲ್ಲಿನ ಉಪಸಂಪಾದಕರಾಗಿರೋ ಮೋಸಮಿ ಸಿಂಗ್ ಇಲ್ಲಿನ ವಾಸ್ತವ ಚಿತ್ರಣವನ್ನ ವಿವರಿಸುತ್ತಿರುವಾಗ, ಅಲ್ಲೇ ಇದ್ದ ಪ್ರತಿಭಟನಾಕಾರರು ಕ್ಯಾಮರಾಮನ್ ಮೇಲೆ ದಾಳಿ ಮಾಡುವುದಕ್ಕೆ ಮುಂದಾಗಿದ್ದಾರೆ.
ತಕ್ಷಣವೇ ಎಚ್ಚೆತ್ತುಕೊಂಡ ಕ್ಯಾಮರಾಮನ್ ನಾವು ಸುದ್ದಿವಾಹಿನಿಯವರು ಅಂತ ಹೇಳಿದ್ಧಾರೆ. ಆದರೂ ಸುಮ್ಮನಿರದ ಪ್ರತಿಭಟನಾಕಾರರು ಅಲ್ಲಿ ಚಿತ್ರೀಕರಿಸಲಾಗಿರೋ ಎಲ್ಲ ದೃಶ್ಯಗಳನ್ನ ಡಿಲೀಟ್ ಮಾಡಿ ಅಂತ ಬೆದರಿಕೆ ಹಾಕಿದ್ದಾರೆ.
ಸದ್ಯಕ್ಕಂತೂ ಬಿಹಾರ್, ಪ್ರತಿಭಟನಾಕಾರರು ಹಚ್ಚಿರುವ ಬೆಂಕಿಯಿಂದ ಉದ್ವಿಗ್ನತೆಯಿಂದ ಕೂಡಿದೆ. ಈ ಪ್ರತಿಭಟನೆ ಇನ್ನೂ ಇದೇ ರೀತಿ ಮುಂದುವರೆದಿದ್ದೇ ಆದರೆ ಮುಂದೆ ಪರಿಸ್ಥಿತಿ ಕೈಮೀರಿ ಹೋಗಲಿದೆ.