ಬೆಂಗಳೂರು: ಪತಿ ಕಿರುಕುಳಕ್ಕೆ ಬೇಸತ್ತು ತುಂಬು ಗರ್ಭಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ನಡೆದಿದೆ.
ಉತ್ತರ ತಾಲೂಕಿನ ಶಿವಪುರದ ಮನೆಯಲ್ಲಿ ಗರ್ಭಿಣಿ ನೇಣಿಗೆ ಕೊರಳೊಡ್ಡಿದ್ದಾರೆ. 19 ವರ್ಷದ ಸೌಂದರ್ಯ ಆತ್ಮಹತ್ಯೆಗೆ ಶರಣಾದ ಮಹಿಳೆ.
ಗಾರ್ಮೆಂಟ್ಸ್ ನಲ್ಲಿ ಉದ್ಯೋಗ ಮಾಡುತ್ತಿದ್ದ ಸೌಂದರ್ಯ ಸಂತೋಷ್ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದಳು. 8 ತಿಂಗಳ ಗರ್ಭಿಣಿಯಾಗಿದ್ದ ಸೌಂದರ್ಯಳಿಗೆ ಪತಿ ಸಂತೋಷ್ ಪ್ರತಿದಿನ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಗಾರ್ಮೆಂಟ್ಸ್ ಉದ್ಯೋಗಿಗಳೆಲ್ಲ ಸೇರಿ ಸೌಂದರ್ಯ ಸೀಮಂತವನ್ನು ಮಾಡಿದ್ದರು. ಆದರೆ ಇದೀಗ ಪತಿ ಹಿಂಸೆಗೆ ಬೇಸತ್ತು ಮನನೊಂದು ಸೌಂದರ ಆತ್ಮಹತ್ಯೆಗೆ ಶರಣಾಗಿದ್ದಾಳೆ.