ರಾಮನಗರ: ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ರೈತರ ಮಕ್ಕಳೆಂದು ಪೋಸ್ ನೀಡಿದರೆ ರೈತರಾಗಲ್ಲ. ಅವರ ನಾಟಕಗಳನ್ನು ಜನ ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ತಲಕಾವೇರಿಯಲ್ಲಿ ಅವರ ಪೂಜೆ ನೋಡಿದ್ದೇನೆ. ಪಂಚೆ ಹಾಕಿ ಶೋ ಮಾಡಿದ ಮಾತ್ರಕ್ಕೆ ರೈತರಾಗುವುದಿಲ್ಲ. ಮೆಟ್ಟಿಲುಗಳ ಮೇಲೆ ನಿಂತು ಪೋಸ್ ಕೊಟ್ಟಿದ್ದೇನು? ನಮಸ್ಕಾರ ಮಾಡಿದ್ದೇನು? ಪಂಚೆ ಹಾಕಿಕೊಂಡು ಓಡಾಡಿದ್ದೇನು? ಇದೆಲ್ಲವನ್ನು ನೋಡಿದ್ದೇನೆ. ನರೇಂದ್ರ ಮೋದಿಯವರು ಮಾಡಿದ್ದನ್ನೇ ಇವರು ಕಾಪಿ ಮಾಡಿದ್ದಾರೆ. ಕಾಪಿ ಮಾಡಿದರೂ ಅದರಲ್ಲೂ ಒಂದು ಒರಿಜಿನಾಲಿಟಿ ಎಂಬುದು ಇರಬೇಕು ಅದೂ ಸಾಧ್ಯವಾಗಿಲ್ಲ. ಇದನ್ನೆಲ್ಲ ಜನ ಮೆಚ್ಚುವುದಿಲ್ಲ ಎಂದು ಡಿಕೆಶಿ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಬಿಇಓ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ರೈತರ ಮಕ್ಕಳು ಎಂದು ನಾವು ಬೋರ್ಡ್ ಹಾಕಿಕೊಂಡಿಲ್ಲ. ಅಥವಾ ಪಂಚೆ ಹಾಕಿದ ಮಾತ್ರಕ್ಕೆ ರೈತರ ಮಕ್ಕಳು ಎಂದು ಅಂದುಕೊಳ್ಳುವುದೂ ಇಲ್ಲ. ಕಾಂಗ್ರೆಸ್ ನಾಯಕರ ಈ ನಾಟಕಗಳಿಗೆ ಜನ ಮರುಳಾಗಲ್ಲೆಂದು ಟಾಂಗ್ ನೀಡಿದ್ದಾರೆ.
ನಿನ್ನೆ ಚನ್ನರಾಯಪಟ್ಟಣದಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಒಬ್ಬರೇನಾ ಪಂಚೆ ಕಟ್ಟಿಕೊಳ್ಳುವುದು? ನಾವು ಕೂಡ ಪಂಚೆ ಕಟ್ಟಿಕೊಳ್ತಿವಿ ಎಂದು ಹೇಳಿಕೆ ನೀಡಿದ್ದರು.