ಬೆಂಗಳೂರು: ಬಜರಂಗದಳ, ಆರ್ ಎಸ್ ಎಸ್ ಸಂಘಟನೆ ನಿಷೇಧ ನೆಹರೂ ಅವರಿಂದಲೇ ಆಗಲಿಲ್ಲ. ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಸಾಧ್ಯವೇ? ಎಂದು ಬಿಜೆಪಿ ಶಾಸಕ ಚನ್ನಬಸಪ್ಪ ಪ್ರಶ್ನಿಸಿದ್ದಾರೆ.
ಮನೆ ಮನೆಯಲ್ಲಿ ಹಿಂದೂತ್ವ ಹಾಗೂ ಆರ್ ಎಸ್ ಎಸ್ ಬೆರೆತು ಹೋಗಿದೆ. ಪ್ರಿಯಾಂಕ್ ಖರ್ಗೆ ಇಂತಹ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅಶ್ವತ್ಥನಾರಾಯಣ, ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು