ಸೂರಿಲ್ಲದ ಬಡವರಿಗೆ ಮನೆ ನಿರ್ಮಿಸಲು ಅನುಕೂಲವಾಗುವಂತೆ ಆಶ್ರಯ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಆದರೆ ನಿವೇಶನ ವಿತರಿಸಿ 20 ವರ್ಷಗಳಿಗೂ ಅಧಿಕ ಕಾಲವಾದರೂ ಸಹ ಮನೆ ನಿರ್ಮಿಸಿಕೊಳ್ಳಲು ವಿಫಲರಾದ ಶಿವಮೊಗ್ಗ ಬೊಮ್ಮನಕಟ್ಟೆಯ 543 ಖಾಲಿ ನಿವೇಶನಗಳನ್ನು ಮಹಾನಗರ ಪಾಲಿಕೆ ರದ್ದುಪಡಿಸಿದೆ.
ಆಶ್ರಯ ಸಮಿತಿ ಇಂದು ಸಭೆ ನಡೆಸಿದ್ದು, ಈ ಹಿಂದೆ ಸ್ಥಳ ಪರಿಶೀಲನೆ ನಡೆಸಿದ ವೇಳೆ ಎ ಬ್ಲಾಕ್ ನಲ್ಲಿ 44, ಬಿ ಬ್ಲಾಕ್ ನಲ್ಲಿ 78, ಸಿ ಬ್ಲಾಕ್ ನಲ್ಲಿ 97, ಡಿ ಬ್ಲಾಕ್ ನಲ್ಲಿ 78, ಇ ಬ್ಲಾಕ್ ನಲ್ಲಿ 51, ಎಫ್ ಬ್ಲಾಕ್ ನಲ್ಲಿ 107 ಮತ್ತು ಜಿ ಬ್ಲಾಕ್ ನಲ್ಲಿ 88 ಸೇರಿದಂತೆ ಒಟ್ಟು 543 ನಿವೇಶನಗಳು ಖಾಲಿ ಇರುವುದು ಕಂಡುಬಂದಿತ್ತು.
ಹೀಗಾಗಿ ನಿವೇಶನ ಪಡೆದುಕೊಳ್ಳುವ ಸಂದರ್ಭದಲ್ಲಿ ಇರುವ ಷರತ್ತುಗಳನ್ನು ಉಲ್ಲಂಘಿಸಿದಂತಾಗಿದ್ದು, ಮನೆ ನಿರ್ಮಿಸಿಕೊಳ್ಳುವಂತೆ ಹಲವು ಬಾರಿ ಸೂಚನೆ ನೀಡಲಾಗಿದ್ದರು ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, 543 ಖಾಲಿ ನಿವೇಶನಗಳನ್ನು ರದ್ದುಪಡಿಸಿ ಅರ್ಹರಿಗೆ ವಿತರಿಸಲು ತೀರ್ಮಾನಿಸಲಾಗಿದೆ.