ಉಡುಪಿ: ಅಹಿತಕರ ಘಟನೆಗಳಿಂದ ಹಿಂದೂ ಸಮಾಜ ನೋವಿನಲ್ಲಿದೆ. ಶಾಂತಿ-ಸಾಮರಸ್ಯ ಬಾಯಿಯಲ್ಲಿ ಹೇಳಿದರೆ ಸಾಧ್ಯವಾಗುವುದಿಲ್ಲ. ಎಲ್ಲಾ ಸಮುದಾಯದವರು, ಒಗ್ಗಟ್ಟಿನಿಂದ ನಡೆದುಕೊಂಡಾಗ ಮಾತ್ರ ಸಾಧ್ಯ ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ತಿಳಿಸಿದ್ದಾರೆ.
ಹಿಂದೂ ದೇವಾಲಯಗಳ ಬಳಿ, ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಮುಸ್ಲಿಂ ಹಾಗೂ ಕ್ರೈಸ್ತ ವರ್ತಕರು ಅಬೂಬಕ್ಕರ್ ಅತ್ರಾಡಿ ನೇತೃತ್ವದಲ್ಲಿ ವಿಶ್ವ ಪ್ರಸನ್ನ ಸ್ವಾಮೀಜಿಯವರನ್ನು ಭೇಟಿಯಾಗಿ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಸ್ವಾಮೀಜಿ, ಹಿಂದುಗಳು ಬಹಳ ವರ್ಷಗಳಿಂದ ನೋವನುಭವಿಸಿದ್ದಾರೆ. ಅವರ ಮನಸ್ಸಿಗೆ ನೋವಾಗುವಂತಹ ಘಟನೆಗಳು ಮತ್ತೆ ನಡೆಯಬಾರದು. ಹಸು ಕಳ್ಳತನದಂತಹ ಹಲವು ಘಟನೆಗಳು ನಡೆದಿವೆ. ನಾವು ಕೂಡ ಇಂಥಹ ನೋವನ್ನು ಅನುಭವಿಸಿದ್ದೇವೆ ಎಂದರು.
‘ಗನಿ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಸ್ಟೈಲಿಶ್ ಸ್ಟಾರ್
ಶಾಂತಿ-ಸಾಮರಸ್ಯ, ಸೌಹಾರ್ದಾತೆ ನೆಮ್ಮದಿ ಕೇವಲ ಒಂದು ಗುಂಪಿನಿಂದ ಸಾಧ್ಯವಾಗುವುದಿಲ್ಲ. ನಿರಂತರ ಅನ್ಯಾಯದಿಂದ ನೋವು ಸ್ಫೋಟವಾಗುತ್ತದೆ. ಇಂದು ಅಂತಹ ಸಂದರ್ಭ ಎದುರಾಗಿದೆ. ಶಾಂತಿ ಸಹಬಾಳ್ವೆ ಎಂದು ಬಾಯಲ್ಲಿ ಹೇಳಿದ್ರೆ ಆಗಲ್ಲ. ನಾಲ್ಕು ಜನ ಬಂದು ಮಾತನಾಡಿದ ಮಾತ್ರಕ್ಕೆ ಸರಿ ಹೋಗುವುದು ಇಲ್ಲ. ಎಲ್ಲರೂ ಕುಳಿತು ಈ ಬೆಳವಣಿಗೆಗೆ ಕಾರಣವೇನು ಎಂಬ ಬಗ್ಗೆ ಚರ್ಚಿಸಬೇಕು. ತಳಮಟ್ಟದಲ್ಲಿ ಇವಕ್ಕೆಲ್ಲ ಪರಿಹಾರ ಆಗಬೇಕು ಎಂದು ಹೇಳಿದರು.