ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮು ಕಲಹಕ್ಕಾಗಿ ಕೊಲೆಗಳನ್ನ ನಡೆಸುವ ಸಂಚು ರೂಪಿಸಿದ್ದರು ಎಂಬ ಸಂಗತಿಯನ್ನು NIA ಹೇಳಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ನಿಮ್ಮ ಗುಪ್ತಚರ ಇಲಾಖೆ ಕಡಲೆ ಮಿಠಾಯಿ ತಿನ್ನುತ್ತಿತ್ತೇ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಗುಪ್ತಚರ ಇಲಾಖೆಯ ಕೆಲಸ ಕೇವಲ ಕಾಂಗ್ರೆಸ್ ಚಲನವಲನ ಗಮನಿಸುವುದಕ್ಕೆ ಮಾತ್ರ ಸೀಮಿತವೇ? ಈಗ “ಹಿಂದೂ ಖತರೆ ಮೆ ಹೈ” ಎಂದು ಹೇಳುವುದಿಲ್ಲವೇ ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.
ಗುರು ರಾಘವೇಂದ್ರ ಸಹಕಾರಿ ಬ್ಯಾಂಕಿನ ಹಗರಣ ನಡೆದು 3 ವರ್ಷ ಕಳೆದರೂ ಠೇವಣಿದಾರರಿಗೆ ನ್ಯಾಯ ಸಿಕ್ಕಿಲ್ಲ. ವಂಚನೆ ಮಾಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ಹಿಂದೇಟು ಹಾಕಿದೆ. ಪ್ರಕರಣವನ್ನು ಸಿಬಿಐಗೆ ವಹಿಸುತ್ತೇವೆ ಎಂದರೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಿಲ್ಲ. ಈ ಕಣ್ಣಾಮುಚ್ಚಾಲೆ ಆಟದಿಂದ ಯಾರ ರಕ್ಷಣೆಗೆ ನಿಂತಿದೆ ಸರ್ಕಾರ? ಎಂದು ಸರಣಿ ಟ್ವೀಟ್ ಮೂಲಕ ಕೇಳಿದೆ.