ಬೆಂಗಳೂರು: ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮು ಮಾಲೀಕನನ್ನು ವಿ.ವಿ.ಪುರಂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಾಮರಾಜಪೇಟೆಯ ನ್ಯೂ ತರಗುಪೇಟೆಯ ಗೋದಾಮಿನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭಯಂಕರ ಸ್ಫೋಟಕ್ಕೆ ಮೂವರು ಮೃತಪಟ್ಟಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು ಗೋದಾಮು ಮಾಲೀಕ ಬಾಬು ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಗೋದಾಮಿನಲ್ಲಿ ಎರಡು ಭಾಗ ಮಾಡಲಾಗಿದ್ದು, ಒಂದು ಮುಂಭಾಗದಲ್ಲಿ ಪಂಕ್ಚರ್ ಶಾಪ್ ತೆರೆಯಲು ಅವಕಾಶ ಕೊಡಲಾಗಿತ್ತು. ಗೋದಾಮಿನ ಹಿಂಭಾಗದಲ್ಲಿ ಪಟಾಕಿ ಸಂಗ್ರಹಿಸಿಡಲಾಗಿದ್ದು, ಸುಮಾರು 80 ಬಾಕ್ಸ್ ಪಟಾಕಿ ಶೇಖರಿಸಿಡಲಾಗಿತ್ತು. ಪಟಾಕಿ ಬಾಕ್ಸ್ ಗಳ ಜೊತೆ ಕೆಲ ಸ್ಫೋಟಕಗಳು ಇಟ್ಟಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಮೂರು ಬಾಕ್ಸ್ ಗಳು ಸ್ಫೋಟಗೊಂಡಿವೆ ಎನ್ನಲಾಗಿದೆ.
ಗಣೇಶ ಚತುರ್ಥಿಯಂದು ಕಳೆದು ಹೋದ ಮಗ ಸಿಕ್ಕ ಹೃದಯಸ್ಪರ್ಶಿ ಕಥೆ ವೈರಲ್
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಗೋದಾಮಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಸ್ಥಳದಲ್ಲಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಘಟನೆ ಹೇಗೆ ಆಗಿದೆ ಎಂದು ತನಿಖೆ ನಡೆಸಿದ್ದಾರೆ. ಸ್ಫೋಟದಲ್ಲಿ ಹಲವು ವಾಹನಗಳು ಹಾನಿಯಾಗಿವೆ ಎಂದು ತಿಳಿಸಿದ್ದಾರೆ.