ಬೆಂಗಳೂರು: ನೆಲ, ಜಲ ಭಾಷೆ, ಗಡಿ ವಿಚಾರದಲ್ಲಿ ರಾಜಕೀಯವಿಲ್ಲ, ನಾವೆಲ್ಲರೂ ಒಂದೇ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ನಿರ್ಣಯದಿಂದ ನಮ್ಮ ಹಕ್ಕುಚ್ಯುತಿಯಾಗಿದೆ. ಆದರೆ ನಾವು ಅಂಜುವ ಪ್ರಶ್ನೆ ಇಲ್ಲ. ಅವರ ನಿರ್ಣಯವನ್ನು ಎಲ್ಲರೂ ಖಂಡಿಸುತ್ತೇವೆ. ನಾವು ತಮಿಳುನಾಡು ಮುಲಾಜಿನಲ್ಲಿ ಇಲ್ಲ. ಸರ್ವ ಪಕ್ಷಗಳ ಸಭೆಯಲ್ಲಿಯೂ ಚರ್ಚೆ ಮಾಡಲಾಗಿದೆ. ನೆಲ, ಜಲ, ಭಾಷೆ, ಗಡಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರಕ್ಕೆ ನಮ್ಮ ನಿಲುವಿನ ಬಗ್ಗೆ ತಿಳಿಸಲಾಗಿದೆ ಎಂದರು.
ಗ್ರಾಹಕರಿಗೆ ಉಡುಗೊರೆ ನೀಡಿದ SBI..! ಬಡ್ಡಿ ದರದಲ್ಲಿ ಏರಿಕೆ
ತಮಿಳುನಾಡು ಮೇಕೆದಾಟು ಯೋಜನೆಗೆ ಅಡ್ದಗಾಲು ಹಾಕುತ್ತಿದೆ. ಕೇಂದ್ರ ಪರಿಸರ ಇಲಾಖೆ ಯೋಜನೆಗೆ ಅನುಮತಿ ಕೊಡಲಿ. ಈ ವಿಚಾರವಾಗಿ ಸಿಎಂ ಕೇಂದ್ರ ಸಚಿವರೊಂದಿಗೆ ಚರ್ಚಿಸಿ, ಸಾಧ್ಯವಾದರೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿ. ಪರಿಸರ ಇಲಾಖೆ ಅನುಮತಿಗಾಗಿ ಒತ್ತಾಯಿಸಲಿ ಎಂದು ಹೇಳಿದರು.