ದಾವಣಗೆರೆ: ನಾಳೆ ದಾವಣಗೆರೆಯಲ್ಲಿ ನಡೆಯಲಿರುವ ಮಹಾಸಂಗಮ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಣ್ಣಿನಗರಿಯಲ್ಲಿ ಸೇನಾ ಹಾಗೂ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ದಾವಣಗೆರೆ ಜಿಲ್ಲೆಯಾದ್ಯಂತ ಸೇನಾ ಹೆಲಿಕಾಪ್ಟರ್ ಪ್ರಾಯೋಗಿಕ ಹಾರಾಟದ ಮೂಲಕ ಭದ್ರತೆ ಪರಿಶೀಲನೆ ನಡೆಸಿದೆ. ಜಿಎಂಐಟಿ ಹೆಲಿಪ್ಯಾಡ್ ಗೆ ಬಂದ ಸೇನಾ ಹೆಲಿಕಾಪ್ಟರ್ ನಿರಂತರವಾಗಿ ಹಾರಾಟ ನಡೆಸುತ್ತಿದೆ. ನಾಳೆ ಪ್ರಧಾನಿ ಮೋದಿ ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ನಲ್ಲಿ ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ.
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬಾಂಬ್ ಪತ್ತೆದಳದಿಂದ ತಪಾಸಣೆ ನಡೆದಿದೆ. ಮಹಾಸಂಗಮ ಸಮಾವೇಶ ನಡೆಯುವ 2 ಕೀ.ಮೀ ದೂರದವರೆಗೆ ಡ್ರೋಣ್ ಹಾರಾಟ, ಬ್ಲಾಕ್ ಶರ್ಟ್, ನೀರಿನ ಬಾಟಲ್, ಬ್ಯಾಗ್ ಗಳನ್ನು ನಿಷೇಧಿಸಲಾಗಿದೆ. ಸಮಾವೇಶಕ್ಕೆ ಬರುವ ಜನರನ್ನು ಎರಡು ಹಂತದಲ್ಲಿ ತಪಾಸಣೆ ನಡೆಸಲಾಗುತ್ತಿದೆ.
8 ಎಸ್ ಪಿ, ಎ ಎಸ್ ಪಿಗಳು, 32 ಡಿವೈ ಎಸ್ ಪಿ ಗಳು, 85 ಇನ್ಸ್ ಪೆಕ್ಟರ್ ಗಳು, 900 ಹೋಮ್ ಗಾರ್ಡ್ ಗಳು ಸೇರಿದಂತೆ 4000 ಪೊಲೀಸರನ್ನು ನಿಯೋಜಿಸಲಾಗಿದೆ.