ಕಲಬುರ್ಗಿ: ಲೀಟರ್ ಎಮ್ಮೆ ಹಾಲಿಗೆ ಹೆಚ್ಚುವರಿಯಾಗಿ 9.25ರೂಪಾಯಿ ಹಣ ನೀಡಲು ನಿರ್ಧರಿಸಲಾಗಿದ್ದು, ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಕಲಬುರ್ಗಿಯಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ್ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಆರ್.ಕೆ. ಪಾಟೀಲ್, ನಾಳೆಯಿಂದಲೇ ರೈತರಿಗೆ ಹೆಚ್ಚುವರಿ ಹಣ ನೀಡಲು ಕೆ.ಎಂ.ಎಫ್ ನಿರ್ಧರಿಸಿದೆ ಎಂದು ಹೇಳಿದರು.
ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳ ರೈತರಿಗೆ ಮಾತ್ರ ಇದು ಅನ್ವಯವಾಗಲಿದ್ದು, ಈ ಭಾಗದ ರೈತರಿಗೆ ಲೀಟರ್ ಎಮ್ಮೆ ಹಾಲಿಗೆ 9.25 ರೂ. ನೀಡಲಾಗುತ್ತದೆ. ಈ ಮೊದಲು ಲೀಟರ್ ಎಮ್ಮೆ ಹಾಲಿಗೆ 36.80 ರೂ. ನೀಡಲಾಗುತ್ತಿತು. ಈಗ ಲೀಟರ್ ಹಾಲಿಗೆ 46 ರೂಪಾಯಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.