ನಾಲ್ಕು ಬಾರಿ ಲಸಿಕೆ ಪಡೆದಿರುವ ಮಹಿಳೆಗೆ ಕೊರೋನಾ ಸೋಂಕು ತಗುಲಿದೆ. ಇಂದೋರ್ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಮಹಿಳೆಯನ್ನ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ದೃಢವಾಗಿದೆ. ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ವಿಮಾನ ಹತ್ತದಂತೆ ತಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆ 12 ದಿನಗಳ ಹಿಂದೆ ಮಧ್ಯಪ್ರದೇಶದ ಇಂದೋರ್ ಬಳಿಯ ಮೊವ್ ಪಟ್ಟಣಕ್ಕೆ ಹತ್ತಿರದ ಸಂಬಂಧಿಯೊಬ್ಬರ ಮದುವೆಗೆ ಆಗಮಿಸಿದ್ದರು. ಮದುವೆ ಮುಗಿಸಿಕೊಂಡು ದುಬೈಗೆ ವಾಪಾಸ್ಸಾಗಲು ಹೊರಟಿದ್ದ ಮಹಿಳೆಯನ್ನ ಏರ್ಪೋರ್ಟ್ ನಲ್ಲಿ ಪರೀಕ್ಷಿಸಲಾಯ್ತು. ಆ ವೇಳೆ ಸೋಂಕು ದೃಢಪಟ್ಟಿದ್ದು ಆಕೆಯನ್ನ
ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ದಿನದ ಹಿಂದೆ ನಡೆಸಿದ್ದ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಬಂದಿತ್ತು, ಮಹಿಳೆಯಲ್ಲಿ ಕೋವಿಡ್ ಗುಣಲಕ್ಷಣಗಳು ಇರಲಿಲ್ಲ ಎಂದು ಎಂದು ಇಂದೋರ್ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CHMO) ಡಾ ಭೂರೆ ಸಿಂಗ್ ಸೆಟಿಯಾ ಅವರು ಮಾಹಿತಿ ನೀಡಿದ್ದಾರೆ.
RRR ಚಿತ್ರಕ್ಕೆ ಆಲಿಯಾ ಬ್ಯಾಡ್ ಲಕ್, ವಿವಾದಕ್ಕೀಡಾದ ಕೆಆರ್‌ಕೆ ಹೇಳಿಕೆ
ದುಬೈ ನಿವಾಸಿಯಾಗಿರುವ, 30 ವರ್ಷದ ಈ ಮಹಿಳೆ ಎರಡು ವಿಭಿನ್ನ ಲಸಿಕೆಗಳ ನಾಲ್ಕು ಡೋಸ್ ತೆಗೆದುಕೊಂಡಿದ್ದಾರೆ. ಜನವರಿ ಮತ್ತು ಆಗಸ್ಟ್ ನಡುವೆ ಮಹಿಳೆ ಸಿನೋಫಾರ್ಮ್ ಮತ್ತು ಫೈಜ಼ರ್ ವ್ಯಾಕ್ಸಿನ್ ತೆಗೆದುಕೊಂಡಿದ್ದಾಳೆ ಎಂದು ಡಾ ಭೂರೆ ಸಿಂಗ್ ಸೆಟಿಯಾ ತಿಳಿಸಿದ್ದಾರೆ.
ಸದ್ಯಕ್ಕೆ ಮಹಿಳೆಯಲ್ಲಿ ಕೊರೋನಾ ಗುಣಲಕ್ಷಣಗಳಿಲ್ಲ. ಆದರೆ, ನಾಲ್ಕು ದಿನಗಳ ಹಿಂದೆ ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಬಗ್ಗೆ ವಿಮಾನ ನಿಲ್ದಾಣದ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸಧ್ಯಕ್ಕಿರುವ ನಿಯಮದ ಪ್ರಕಾರ ಹೊರಹೋಗುವವರು ಮತ್ತು ಒಳಬರುವವರನ್ನು ವಿಮಾನ ನಿಲ್ದಾಣದಲ್ಲೆ ಕ್ಷಿಪ್ರ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.