ಹುಬ್ಬಳ್ಳಿ; ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಹೇಳಿಕೆ ತಪ್ಪಾಗಿ ಭಾವಿಸಲಾಗಿದೆ. ನಾನು ಹಾಗೆ ಹೇಳಿಯೇ ಇಲ್ಲ ಎಂದು ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ಹಿಜಾಬ್ ಧರಿಸದೇ ಇದ್ದರೆ ರೇಪ್ ಆಗುತ್ತೆ ಎಂದು ನಾನು ಹೇಳಿಲ್ಲ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಗೊಂದಲ ಸೃಷ್ಟಿ ಮಾಡಿದರೆ ನಾನೇನು ಮಾಡಲಿ? ಸೇಫ್ಟಿಗಾಗಿ ಹಿಜಾಬ್ ಹಾಕುತ್ತಾರೆ ಎಂದು ನಾನು ಹೇಳಿದ್ದೆ ಎಂದರು.
ಬಡ ಎಲೆಕ್ಟ್ರಿಷಿಯನ್ ಪುತ್ರ ಇದೀಗ ʼಕೋಟ್ಯಾಧಿಪತಿʼ
ಹಿಜಾಬ್ ಧರಿಸುವುದರಿಂದ ಸಮಸ್ಯೆ ಏನು ಎಂದು ಕೇಳಿದ್ದೆ. ಈಗ ಸೇಫ್ಟಿಗಾಗಿ ಹೆಲ್ಮೆಟ್ ಧರಿಸುತ್ತಾರೆ. ಹೆಲ್ಮೆಟ್ ಗೆ ಅವಕಾಶವಿದೆ. ಅದೇ ರೀತಿ ಸೇಫ್ಟಿಗಾಗಿ ಹಿಜಾಬ್ ಧರಿಸುತ್ತಾರೆ. ಅದರಲ್ಲಿ ತಪ್ಪೇನು? ವಿವಾದ ಹೈಕೋರ್ಟ್ ನಲ್ಲಿದೆ. ಹೈಕೋರ್ಟ್ ಏನು ತೀರ್ಪು ನೀಡುತ್ತೋ ಅದಕ್ಕೆ ತಲೆಬಾಗುತ್ತೇವೆ ಎಂದು ಹೇಳಿದ್ದಾರೆ.