ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಹೊಣೆಯನ್ನು ರಾಜ್ಯಧ್ಯಕ್ಷರಾಗಿರುವ ನಳೀನ್ ಕುಮಾರ್ ಕಟೀಲ್ ಹೊತ್ತಿದ್ದಾರೆ. ಅವರು ಶ್ರಮ ಜೀವಿ. ಆದರೆ ಪಕ್ಷಕ್ಕಾಗಿ ಕೆಲಸ ಮಾಡಲು ನಾನು ರಾಜ್ಯಾಧ್ಯಕ್ಷ ಸ್ಥಾನವನ್ನು ಕೇಳಿದ್ದೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ವಿ. ಸೋಮಣ್ಣ, ಚುನಾವಣೆಯಲ್ಲಿ ಫೋರ್, ಸಿಕ್ಸರ್ ಹೊಡೆಯೋಕೆ ಹೋಗಿದ್ದೆ. ಆದರೆ ಫೋರ್, ಸಿಕ್ಸರ್ ಭರದಲ್ಲಿ ಬೌಲ್ಡ್ ಆಗಿದ್ದೇನೆ. ನಾನು ಸನ್ಯಾಸಿ ಅಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ. ಪಕ್ಷದ ಕೆಲಸಕ್ಕಾಗಿ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ. ಪಕ್ಷ ಏನು ತೀರ್ಮಾನ ಮಾಡುತ್ತದೆ ನೋಡೋಣ ಎಂದು ಹೇಳಿದರು.
ಪಕ್ಷದಲ್ಲಿ ನನಗಿಂತ ಬುದ್ಧಿವಂತರು ಇದ್ದರೆ ಅವರಿಗೆ ಕೊಡ್ಲಿ. ಪಕ್ಷ ಕೊಡುವ ಜವಾಬ್ದಾರಿಯನ್ನು ಮಾತ್ರ ನಾನು ನಿರ್ವಹಿಸುತ್ತೇನೆ. ಹಿಂದೆ ಮುಂದೆ ಮಾತನಾಡೋರ ನೀತಿ ಗೊತ್ತಿದೆ. ನಾನು ಸುಮ್ಮನೇ ಕೂರುವ ವ್ಯಕ್ತಿ ಅಲ್ಲ, ನಾನೂ ನಿದ್ರಿಸಲ್ಲ, ಬೇರೆಯವರಿಗೂ ನಿದ್ರೆ ಮಾಡಲು ಬಿಡಲ್ಲ ಎಂದು ಹೇಳಿದ್ದಾರೆ.