
ತುಮಕೂರು: ನಾನು ಇಂದು ಬೇರೆ ಪಕ್ಷದಲ್ಲಿ ಇದ್ದರೂ ಕೂಡ ನಾನು ಸಚಿವನಾಗಲು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಕಾರಣ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ತುಮಕೂರಿನ ದೊಡ್ಡಸೆಗ್ಗರೆ ಗ್ರಾಮದಲ್ಲಿ ಮಾತನಾಡಿದ ಸಚಿವ ಸುಧಾಕರ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನು ಹಾಡಿ ಹೊಗಳಿದರು. ನಾನು ಇಂದು ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವನಾಗಲು ಕಾರಣ ಪರಮೇಶ್ವರ್ ಅವರು ಎಂದರು.
1993ರಲ್ಲಿ ಜಿ.ಪರಮೇಶ್ವರ್ ಅವರು ನನಗೆ ಎಂಬಿಬಿಎಸ್ ಸೀಟು ಕೊಟ್ಟಿದ್ದರು. 2013ರಲ್ಲಿ ನಾನು ಶಾಸಕನಾಗಲು ಅವಕಾಶ ಮಾಡಿಕೊಟ್ಟರು. ನಾನು ಇಂದು ಬೇರೆ ಪಕ್ಷದಲ್ಲಿ ಇದ್ದೇನೆ ಅದು ಬೇರೆ ಮಾತು. ಆದರೆ ಪರಮೇಶ್ವರ್ ಅವರ ಆತ್ಮೀಯತೆಯನ್ನು ನಾನು ಯಾವತ್ತೂ ಮರೆಯಲ್ಲ. ತುಮಕೂರಿನ ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.