ವಿಜಯಪುರ: ಉಪಚುನಾವಣೆ ಅಖಾಡದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದ್ದು, ಈ ನಡುವೆ ರಾಜಕೀಯ ನಾಯಕರ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಮಿನಿ ಸಮರದಲ್ಲಿನ ಕಂಬಳಿ ಕದನ ಇದೀಗ ಟೋಪಿ ವಾರ್ ವರೆಗೂ ಬಂದು ನಿಂತಿದೆ.
ಲಖೀಂಪುರ ಖೇರಿ ಹಿಂಸಾಚಾರ: ಪ್ರತ್ಯಕ್ಷದರ್ಶಿಗಳ ಸಂಪೂರ್ಣ ಮಾಹಿತಿ ನೀಡಿದ ಎಸ್ಐಟಿ
ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಎಂಬ ಸಿದ್ದರಾಮಯ್ಯ ಅವರ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ? ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್ ಪ್ರಶ್ನೆಗೆ ಕೆಂಡ ಕಾರಿರುವ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ದೀಪಾವಳಿಗೂ ಮುನ್ನ ಮನೆಯಿಂದ ಹೊರ ಹಾಕಿ ಈ ವಸ್ತು
ನಾನು ಗಾಂಧಿ ಟೋಪಿ ಬೇಕಾದರೂ ಹಾಕಿಕೊಳ್ತೀನಿ, ಮುಸ್ಲೀಂ ಟೋಪಿ ಬೇಕಾದರೂ ಹಾಕಿಕೊಳ್ತೀನಿ, ನಾನು ಯಾವ ಟೋಪಿ ಬೇಕಾದ್ರೂ ಹಾಕಿಕೊಳ್ತೀನಿ ಅದನ್ನು ಕೇಳಲು ಅವನ್ಯಾರು? ಎಂದು ಸಿ.ಟಿ.ರವಿಗೆ ಪ್ರಶ್ನಿಸಿದ್ದಾರೆ.
ನಾನು ಕಂಬಳಿ ವಿಚಾರವನ್ನು ರಾಜಕೀಯಕ್ಕೆ ತಂದಿಲ್ಲ, ಅದನ್ನು ರಾಜಕೀಯ ಮಾಡಿದವರು ಸಿಎಂ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ. ಕುಮಾರಸ್ವಾಮಿ ಓರ್ವ ಮಹಾನ್ ಸುಳ್ಳುಗಾರ ಎಂದು ಕಿಡಿಕಾರಿದರು.