ವಿಜಯಪುರ: ಉಪಚುನಾವಣಾ ಮತ ಭೇಟೆಗಾಗಿ ಮಾತಿನ ಬರದಲ್ಲಿ ಎಲ್ಲೆ ಮೀರಿ ವಾಗ್ದಾಳಿ ನಡೆಸುತ್ತಿರುವ ರಾಜಕೀಯ ಪಕ್ಷಗಳ ನಾಯಕರು ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಕಡಿಮೆ ಹೂಡಿಕೆಯಲ್ಲಿ ಸುಲಭವಾಗಿ ಈ ವ್ಯವಹಾರ ಶುರು ಮಾಡಿ ಗಳಿಸಿ ʼಲಾಭʼ
ಕುಮಾರಸ್ವಾಮಿ ವಿರುದ್ಧ ‘ಬೈಗಮಿ’ ಪದ ಬಳಸಿ ಹೆಚ್.ಡಿ.ಕೆಗೆ ಇಬ್ಬರು ಹೆಂಡತಿಯರು’ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದ ಬಿಜೆಪಿಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ ‘ಆ ಪದ ಬಿಜೆಪಿಯವರಿಗೂ ಅನ್ವಯವಾಗುತ್ತೆ’ ಎಂದಿದ್ದಾರೆ.
ವಿಜಯಪುರದ ರಾಂಪುರದಲ್ಲಿ ಮಾತನಾಡಿದ ಕುಮಾರಸ್ವಾಮಿ, ತಮ್ಮ ಬಗ್ಗೆ ಬಿಜೆಪಿ ’ಬೈಗಮಿ’ ಪದ ಬಳಕೆ ಮಾಡಿ ಟ್ವೀಟ್ ಮಾಡಿದ್ದನ್ನು ಪ್ರಸ್ತಾಪಿಸಿ, ”ಆ ಪದ ಬಿಜೆಪಿಯವರಿಗೂ ಅನ್ವಯವಾಗುತ್ತೆ. ಪ್ರತಿನಿತ್ಯ ಅದರ ಆಧಾರದ ಮೇಲೆ ಅವರು ನಡೆಯೋದು’ ಎಂದು ಹೇಳಿದ್ದಾರೆ.
ರೈಲಿನಲ್ಲಿ ಆಹಾರ ಸೇವಿಸಿದ ಅನುಭವ ನೀಡುತ್ತೆ ಈ ‘ರೆಸ್ಟೋರೆಂಟ್ʼ
ನಮ್ಮ ಪಕ್ಷದ ಬೆಳವಣಿಗೆ ಸಹಿಸಲು ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಗೂ ಆಗುತ್ತಿಲ್ಲ. ಬಿಜೆಪಿಗರ ಮನೆಯಲ್ಲಿ ಹೆಗ್ಗಣವೇ ಸತ್ತುಬಿದ್ದಿದೆ. ನೀವು ನನ್ನ ಬಗ್ಗೆ ಮಾತನಾಡಿದರೆ ನಿಮ್ಮ ಹತ್ತರಷ್ಟು ಕೆಸರನ್ನು ನಾನು ಎರಚಬಲ್ಲೆ ಎಂದು ಗುಡುಗಿದ್ದಾರೆ.
ನಾನು ಯಾವುದನ್ನೂ ಕದ್ದು ಮಾಡಿಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿಯೇ ಮಾತನಾಡಿದ್ದೆ. ಜೀವನದಲ್ಲಿ ಕೆಲ ಕೆಟ್ಟ ಘಟನೆಗಳು ನಡೆದಿವೆ. ದಾರಿ ತಪ್ಪಿದ್ದೆ ಅದನ್ನು ಸರಿ ಮಾಡಿಕೊಂಡಿದ್ದೇನೆ. ನಾನು ಇನ್ನೊಬ್ಬರ ರೀತಿ ಕದ್ದು ಮುಚ್ಚಿ ಏನನ್ನೂ ಮಾಡಲ್ಲ. ಬಿಜೆಪಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಇತಿಹಾಸವಿದೆ. ನನ್ನ ವೈಯಕ್ತಿಕ ವಿಚಾರ ಪ್ರಸ್ತಾಪ ಮಾಡಿ ಮಾತನಾಡಿದರೆ ನಾನು ಆತಂಕಪಡಲ್ಲ. ನಿಮ್ಮ ಹತ್ತರಷ್ಟು ಕೆಸರನ್ನು ನಾನು ಹೊರತೆಗೆಯಬಲ್ಲೆ. ಆದರೆ ರಾಜಕೀಯ ರಂಗದಲ್ಲಿ ವೈಯಕ್ತಿಕ ವಿಚಾರಗಳು ಬೇಡ. ಬಿಜೆಪಿ ನಾಯಕರು ಜವಾಬ್ದಾರಿ ಅರಿತು ಮಾತನಾಡಲಿ ಎಂದು ತಿರುಗೇಟು ನೀಡಿದರು.