ಬೆಳಗಾವಿ: ನನ್ನ ವಿರುದ್ಧ ಬೇನಾಮಿ ಆಸ್ತಿ ಸಂಪಾದನೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಅದನ್ನು ದೃಢ ಪಡಿಸಲಿ, ಇಲ್ಲವೇ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಬೇನಾಮಿ ಆಸ್ತಿ ಸಂಪಾದಿಸಲು ನಮ್ಮಪ್ಪ ಸಿಎಂ ಆಗಿರಲಿಲ್ಲ, ನ್ಯಾಯಯುತವಾಗಿ ದುಡಿಯುವ ಸಂಸ್ಕಾರ ಹೇಳಿಕೊಟ್ಟಿದ್ದಾರೆ. ನಾನು ಮಧ್ಯಮವರ್ಗದ ರೈತನ ಮಗ. ಪ್ರತಿ ವರ್ಷ ಆಸ್ತಿ ಘೋಷಣೆ ಮಾಡುತ್ತಿದ್ದೇನೆ. ರಾಜಕೀಯಕ್ಕೆ ಬರುವ ಮುನ್ನವೂ ಆಸ್ತಿ ವಿವರ ಸಲ್ಲಿಸಿದ್ದೇನೆ ಎಂದರು.
ನನ್ನ ಆಸ್ತಿ ವರ್ಷಕ್ಕೆ 800 ಕೋಟಿ ಪಟ್ಟು ಹೆಚ್ಚಿಗೆ ಆಗಿಲ್ಲ. ನನ್ನ ಬಳಿ ಬೇನಾಮಿ ಆಸ್ತಿ, ಅಕ್ರಮ ಆಸ್ತಿ ಇರುವುದನ್ನು ಕಾಂಗ್ರೆಸ್ ನಾಯಕರು ದೃಢಪಡಿಸಲಿ ಎಂದು ಸವಾಲು ಹಾಕಿದರು.
ಗ್ಯಾಂಗ್ ಕಟ್ಟಿಕೊಂಡು ಓಡಾಡಲು ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯನಲ್ಲ, ನನ್ನ ಟ್ರ್ಯಾಕ್ ರೆಕಾರ್ಡ್ ತೆಗೆದು ಚೆಕ್ ಮಾಡಲಿ. ಕೆಲವರು ನಾನು ಕುಡಿದು ಮಾತನಾಡ್ತೀನಿ ಅಂತಿದ್ದಾರೆ. ನನ್ನ ಬ್ಲಡ್ ನಲ್ಲಿ ಗಾಂಜಾ, ಮಧ್ಯಪಾನ ಮಾಡಿರೋದು ಸಿಕ್ಕಿದ್ರೆ ಆಗ ಮಾತನಾಡಲಿ. ಕುಡಿದು ಓಡಾಡಲು ಆಗದಿರುವವರು ಯಾರು ಅಂತ ಎಲ್ಲರಿಗೂ ಗೊತ್ತು.ನನ್ನ ಜೊತೆ ಕಾಂಪಿಟೇಶನ್ ಗೆ ಬರಲಿ ಬೆಳಗಾವಿ ವರೆಗೂ ಓಡಿ ತೋರಿಸ್ತೀನಿ ಎಂದಿದ್ದಾರೆ