ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಅರ್ಜಿಗೆ ಶುಲ್ಕ ವಿಚಾರವಾಗಿ ಬಿಜೆಪಿ ನಾಯಕರು ವ್ಯಂಗ್ಯವಾಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರಿಗೆ ಸರ್ಕಾರ ಇದೆ. ಹಾಗಾಗಿ ಬಾಂಡ್ ವಸೂಲಿ ಮಾಡಿದ್ದಾರೆ. ನಮಗೆ ಬಾಂಡ್ ಕೊಡುವವರು ಯಾರೂ ಇಲ್ಲ. ಹಾಗಾಗಿ ನಾವು ನಮ್ಮ ಕಾರ್ಯಕರ್ತರ ಬಳಿ ಬಾಂಡ್ ತೆಗೆದುಕೊಳ್ಳುತ್ತಿದ್ದೇವೆ. ನಾನು ಬಾಂಡ್ ತೆಗೆದುಕೊಂಡರೆ ಬಿಜೆಪಿಯವರಿಗೆ ಏನ್ ನೋವು? ಎಂದು ಪ್ರಶ್ನಿಸಿದ್ದಾರೆ.
ಅರ್ಜಿಗೆ 5 ಸಾವಿರ, 2 ಲಕ್ಷ ಡಿಡಿ, 1 ಲಕ್ಷ ಡಿಡಿ ಕೇಳಿದ್ದೇವೆ. ನಮ್ಮ ಕಾರ್ಯಕರ್ತರು ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಅಸಮಾಧಾನ ವ್ಯಕ್ತಪಡಿಸಿದರೆ ಅಂತವರು ಯಾರೂ ಪಕ್ಷದಲ್ಲಿ ಇರಬೇಕಿಲ್ಲ. ನಾವು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತೇವೆ. ಇದು ನನ್ನ ವೈಯಕ್ತಿಕ ವಿಚಾರವಲ್ಲ, ಪಾರ್ಟಿಯ ವಿಚಾರ. ಮಾತನಾಡುವವರು ಯಾರೂ ಪಾರ್ಟಿ ಬಾವುಟ ಕಟ್ಟುವುದಿಲ್ಲ ಎಂದು ಗುಡುಗಿದ್ದಾರೆ.