ಬೆಂಗಳೂರು: ಸಿದ್ದರಾಮೋತ್ಸವ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿದ್ದರಾಮೋತ್ಸವ ವಿಚಾರವಾಗಿ ಯಾರಿಗೆ ಕೇಳಬೇಕೋ ಅವರನ್ನು ಕೇಳಿ ಎಂದು ಖಾರವಾಗಿ ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು ಪಕ್ಷದ ಶಿಸ್ತಿನ ಸಿಪಾಯಿ. ನನಗೆ ಸೋನಿಯಾ ಗಾಂಧಿಯವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನನಗೂ ಇತಿ ಮಿತಿ ಇದೆ. ಸಿದ್ದರಾಮೋತ್ಸವದ ವಿಚಾರವಾಗಿ ಯಾರಿಗೆ ಕೇಳಬೇಕು ಅವರನ್ನು ಕೇಳಿ ಎಂದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ನ್ಯಾಯ ಒದಗಿಸಿಕೊಡುವಂತೆ ಅವರ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಸಂತೋಷ್ ಪಾಟೀಲ್ ರೀತಿ ಹಲವರು ನೊಂದಿದ್ದಾರೆ. ಮಠಾಧೀಶರು ಕಮೀಷನ್ ಬಗ್ಗೆ ಮಾತನಾಡಿದರೂ ಅವರ ಮೇಲೆ ಕೇಸು ಹಾಕಿಲ್ಲ. ಮಾಜಿ ಸಿಎಂ ಮಗ ಇದ್ದಾರೆ ಎಂದು ಶಾಸಕರೇ ಹೇಳಿದ್ದಾರೆ. ಅವರು ಇದ್ದಾರೋ ಇಲ್ವೋ ಎಂಬುದು ಕೂಡ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಭಾರೀ ಮಳೆಯಿಂದಾಗಿ ನೆಲಕ್ಕುರುಳಿದ ಬೃಹದಾಕಾರದ ಮರ
ಇನ್ನು ಪಿಎಸ್ಐ ಹಗರಣ ವಿಚಾರವಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ಸರ್ಕಾರದಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದೆ. ಯಾವ ಹುದ್ದೆಗೆ ಎಷ್ಟು ಹಣ ಎಂದು ಹೋಟೆಲ್ ಮೆನು ಕಾರ್ಡ್ ರೀತಿಯಲ್ಲಿ ಲಿಸ್ಟ್ ಹಾಕಿದ್ದಾರೆ. ಅಮೃತ್ ಪೌಲ್ ಅವರನ್ನು ಕೋರ್ಟ್ ಮುಂದೆ ನಿಲ್ಲಿಸಿ ವಿಚಾರಿಸಲಿ ಹಗರಣದಲ್ಲಿ ಯಾರೆಲ್ಲ ಇದ್ದಾರೆ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.