alex Certify BIG NEWS: ನಾನು ಚಾಮರಾಜಪೇಟೆ ಮಗ; ಮನೆ ಮಗನನ್ನು ಯಾರೂ ಬಿಟ್ಟು ಕೊಡಲ್ಲ; ಸೈಲೆಂಟ್ ಸುನೀಲ್ ಸ್ಪರ್ಧೆಗೆ ಟಾಂಗ್ ನೀಡಿದ ಜಮೀರ್ ಅಹ್ಮದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾನು ಚಾಮರಾಜಪೇಟೆ ಮಗ; ಮನೆ ಮಗನನ್ನು ಯಾರೂ ಬಿಟ್ಟು ಕೊಡಲ್ಲ; ಸೈಲೆಂಟ್ ಸುನೀಲ್ ಸ್ಪರ್ಧೆಗೆ ಟಾಂಗ್ ನೀಡಿದ ಜಮೀರ್ ಅಹ್ಮದ್

ಬೆಂಗಳೂರು: ಚಾಮರಾಜಪೇಟೆಯಿಂದ ಸೈಲೆಂಟ್ ಸುನೀಲ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಶಾಸಕ ಜಮೀರ್ ಅಹ್ಮದ್, ಚಾಮರಾಜಪೇಟೆಯಿಂದ ಯಾರು ಬೇಕಾದರೂ ಸ್ಪರ್ಧೆ ಮಾಡಲಿ ಗೆಲುವು ನನ್ನದೇ ಎಂದು ಹೇಳಿದ್ದಾರೆ.

2018ರಲ್ಲಿ ಎಲ್ಲಾ ಶಕ್ತಿಗಳು ಒಂದಾಗಿದ್ದವು. ಆಗ ಏನಾಯಿತು ? ಹೆಚ್.ಡಿ. ದೇವೇಗೌಡರೇ ಚಾಲೇಂಜ್ ತೆಗೆದುಕೊಂಡರು. ಏನಾಯಿತು ? ಇದೇ ದೇವೇಗೌಡರು ಜೆಡಿಎಸ್ ನಲ್ಲಿ ಮುಸ್ಲಿಂ ಆಗಲು ಹೊರಟರು. ಜಮ್ಮು-ಕಾಶ್ಮೀರದಿಂದ ಫಾರುಖ್ ಅಬ್ದುಲ್ಲಾ ಕರೆತಂದು ನಿಲ್ಲಿಸಿ ಎಂದು ಹೇಳಿದ್ದೆ. ಇಲ್ಲವಾದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣ ಅವರನ್ನು ನಿಲ್ಲಿಸಿ ಎಂದಿದ್ದೆ. ನಾನು ಸೋತರೆ ನನ್ನ ತಲೆ ಕತ್ತರಿಸಿಕೊಳ್ಳುವುದಾಗಿ ಹೇಳಿದ್ದೆ. ಕೊನೆಗೆ ಏನಾಯಿತು? ಆ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಲೀಡ್ ಮೂಲಕ ಗೆಲುವು ಬಂತು ಎಂದರು.

ನಾನು ಚಾಮರಾಜಪೇಟೆ ಮಗ, ಮನೆ ಮಗನನ್ನು ಯಾರಾದರೂ ಬಿಟ್ಟುಕೊಡ್ತಾರಾ? ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ಹೆಚ್ಚು ಲೀಡ್ ನಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...