ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ನವೆಂಬರ್ 12ರಂದು ರಾಷ್ಟ್ರದಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ತೀರ್ಮಾನಿಸಿದೆ.
ಪರಸ್ಪರ ಒಮ್ಮತದ ಮೇರೆಗೆ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲು ಇದರಿಂದ ಅನುಕೂಲವಾಗಲಿದ್ದು, ನ್ಯಾಯಾಲಯಗಳ ಮೇಲಿನ ಒತ್ತಡವೂ ಸಹ ಕಡಿಮೆಯಾಗಲಿದೆ. ರಾಷ್ಟ್ರೀಯ ಲೋಕ ಅದಾಲತ್ ನಡೆಸುವ ಕುರಿತು ಈಗಾಗಲೇ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಲಾಗಿದೆ.
ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ತಮ್ಮ ಪ್ರಕರಣವನ್ನು ಇತ್ಯರ್ಥಗೊಳಿಸಿಕೊಳ್ಳಲು ಬಯಸುವವರು http://cms.nic.in/ncdrcusersWeb/ ಅಥವಾ ಹೆಲ್ಪ್ ಲೈನ್ ಸಂಖ್ಯೆ 1915 ಕ್ಕೆ ಕರೆ ಮಾಡಬಹುದಾಗಿದೆ.
ಮೂಲಗಳ ಪ್ರಕಾರ ದೇಶದಲ್ಲಿ ಲಕ್ಷಾಂತರ ಪ್ರಕರಣಗಳು ಈ ರೀತಿ ಬಾಕಿ ಉಳಿದಿದ್ದು, ಈ ಪೈಕಿ ಬ್ಯಾಂಕಿಂಗ್ 71,379, ಇನ್ಸೂರೆನ್ಸ್ 1,68,827, ಇ ಕಾಮರ್ಸ್ 1,247, ಎಲೆಕ್ಟ್ರಿಸಿಟಿ 33,919, ರೈಲ್ವೆ 2,316 ಪ್ರಕರಣಗಳು ಇವೆ ಎಂದು ಹೇಳಲಾಗಿದೆ.