ಮೈಸೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರಿಗೆ ಸೇರಿದ ರೆಸ್ಟೋರೆಂಟ್ ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಧಮ್ಕಿ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನಲ್ಲಿರುವ ’ಕೇಸರಿ’ ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದೆ. ಕೃತ್ತಿಕಾ ಗೌಡ ಎಂಬ ಮಹಿಳೆ ಈ ರೆಸ್ಟೋರೆಂಟ್ ನಡೆಸುತ್ತಿದ್ದು, ರೆಸ್ಟೋರೆಂಟ್ ನ ಉಸ್ತುವಾರಿ ವಹಿಸಿದ್ದ ರಿಯಾಜ್ ಅಹ್ಮದ್ ಎಂಬುವವರು ರೆಸ್ಟೋರೆಂಟ್ ಗೆ ನುಗ್ಗಿ, ಜಾಗ ಖಾಲಿ ಮಾಡುವಂತೆ ಕೃತ್ತಿಕಾ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳೆಯನ್ನು ಎಳೆದಾಡಿ ತಳ್ಳಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
SHOCKING NEWS: ಮಲಗಿದ್ದ ವೇಳೆ ಪತಿಯನ್ನೆ ಬರ್ಬರವಾಗಿ ಹತ್ಯೆಗೈದ ಪತ್ನಿ
ಹಲ್ಲೆಗೊಳಗಾದ ಮಹಿಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದು, ತನ್ನ ಮೇಲೆ ರಿಯಾಜ್ ಎಂಬಾತ ಹಲ್ಲೆ ನಡೆಸಿದ್ದು, ಜಾಗ ಖಾಲಿ ಮಾಡುವಂತೆ ಧಮ್ಕಿ ಹಾಕಿದ್ದಾರೆ. ಮೂರು ವರ್ಷಗಳ ಕಾಲ ಹೋಟೆಲ್ ನ್ನು ತಾನು 20 ಲಕ್ಷ ರೂಪಾಯಿ ಕೊಟ್ಟು ಅಗ್ರಿಮೆಂಟ್ ಮಾಡಿಕೊಂಡಿದ್ದೇನೆ. ಅಗ್ರಿ ಮೆಂಟ್ ಪೇಪರ್, ಹಣ ವರ್ಗಾವಣೆ ಕುರಿತ ಬ್ಯಾಂಕ್ ದಾಖಲೆ ಪತ್ರ ಎಲ್ಲವೂ ನನ್ನ ಬಳಿ ಇದೆ. ಆದರೆ ಈಗ 1 ವರ್ಷಕ್ಕೆ ಹೋಟೆಲ್ ಬಿಟ್ಟು ಹೋಗುವಂತೆ ಧಮ್ಕಿ ಹಾಕುತ್ತಿದ್ದಾರೆ. ಹೋಟೆಲ್ ಗೆ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಮೈಸೂರಿನ ಎನ್.ಆರ್.ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.