ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚಾರಣೆ ನಿಟ್ಟಿನಲ್ಲಿ ನಾಲ್ಕನೇ ದಿನವೂ ಜೆಸಿಬಿಗಳು ಘರ್ಜಿಸುತ್ತಿದ್ದು, ಕೆಲವಡೆ ಒತ್ತುವರಿಗೆ ಜನಪ್ರತಿನಿದಿಗಳಿಂದಲೇ ಅಡ್ಡಿಯಾಗುತ್ತಿರುವ ಘಟನೆ ನಡೆದಿದೆ.
ಶಾಸಕ ಹ್ಯಾರಿಸ್ ಅವರಿಗೆ ಸೇರಿದ ನಲಪಾಡ್ ಅಕಾಡೆಮಿ ಒತ್ತುವರಿ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಎರಡು ದಿನಗಳ ಹಿಂದೆಯೇ ಸ್ಥಳದಲ್ಲಿ ಬೀಡು ಬಿಟ್ಟಿದ್ದರು. ಆದರೆ ಶಾಸಕರ ಪಿಎ ಬೆದರಿಕೆಯೊಡ್ಡಿದ ಪರಿಣಾಮ ಒತ್ತುವರಿ ತೆರವು ಕಾರ್ಯ ಮಂದಗತಿಯಲ್ಲಿ ಸಾಗಿತ್ತು. ಇದೀಗ ಶಾಸಕರ ಜಾಗದಲ್ಲಿ ಒತ್ತುವರಿ ತೆರವಿಗೆ ಕೋರ್ಟ್ ನಿಂದ ತಡೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸಧ್ಯಕ್ಕೆ ನಲಪಾಡ್ ಅಕಾಡೆಮಿಯ ಒತ್ತುವರಿ ತೆರವಿಗೆ ಕೋರ್ಟ್ ನಿಂದ ತಡೆ ನೀಡಲಾಗಿದ್ದು, ನಾಳೆ ಜಾಯಿಂಟ್ ಸರ್ವೆ ಮಾಡುವಂತೆ ನ್ಯಾಯಾಲಯದಿಂದ ಸೂಚನೆ ಬಂದಿದೆ. ಈ ನಿಟ್ಟಿನಲ್ಲಿ ತೆರವು ಕಾರ್ಯಾಚರಣೆ ನಿಲ್ಲಿಸಲಾಗಿದ್ದು, ಜಾಯಿಂಟ್ ಸರ್ವೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.