ಮೈಸೂರು: ವಲಸೆ ಬಂದ 17 ಶಾಸಕರಿಂದಲೇ ನಾಯಕತ್ವ ಬದಲಾವಣೆ ಗೊಂದಲ ಶುರುವಾಗಿದ್ದು ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ನಾವು ಬಿಜೆಪಿ ಬಂದಿದ್ದರಿಂದಲೆ ಈಶ್ವರಪ್ಪ ಸಚಿವರಾಗಿದ್ದು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, 17 ಜನ ಬಿಜೆಪಿಗೆ ಬಂದಿದ್ದರಿಂದಲೇ ಸರ್ಕಾರ ರಚನೆಯಾಗಿ, ಈಶ್ವರಪ್ಪನವರು ಮಂತ್ರಿಯಾಗಲು ಸಾಧ್ಯವಾಯಿತು. ಈಗ ಈಶ್ವರಪ್ಪ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ನಾಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆಗಳಿಗೆ ನಾಳೆ ತೆರೆ ಬೀಳುತ್ತೆ. ಪಕ್ಷದಲ್ಲಿರುವ ಗೊಂದಲಗಳಿಗೂ ಪರಿಹಾರ ಸಿಗಲಿದ್ದು, ಹೇಳಿಕೆಗಳನ್ನು ನೀಡುವ ನಾಯಕರಿಗೂ ತಿಳಿ ಹೇಳಲಿದ್ದಾರೆ ಎಂದರು.