ಬೆಂಗಳೂರು: 2023 ಜೆಡಿಎಸ್ ಗೆ ಕೊನೆ ಚುನಾವಣೆ ಎಂಬ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಿಖಿಲ್ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಮ್ಮದು ಚಿಕ್ಕ ಪಕ್ಷ, ರಾಜ್ಯದಲ್ಲಿ ಕೆಲವೇ ಶಾಸಕರಿದ್ದಾರೆ. 2023ರ ಚುನಾವಣೆ ಜೆಡಿಎಸ್ ಗೆ ಅಗ್ನಿಪರೀಕ್ಷೆಯಾಗಿದೆ. ಅಡಿಪಾಯ ಹಾಕುವ ರೀತಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಹೆಚ್ಚುಕಮ್ಮಿ ಏನಾದ್ರೂ ಆದ್ರೆ ಪಕ್ಷಕ್ಕೆ ಹಿನ್ನಡೆಯಾಗತ್ತೆ. ಹಾಗಾಗಿ ನಿಖಿಲ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವುದು ಬೇಡ ಎಂದು ಹೇಳಿದರು.