ಬೆಂಗಳೂರು: ಬಿಜೆಪಿ ನಾಯಕರು ಏನು ಬೇಕಾದರೂ ಮಾಡಲಿ, ಅವರು ಏನೇನು ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನಾಮಪತ್ರ ವಿಚಾರವಾಗಿ ಏನು ಮಾಡಿದ್ದಾರೆ ಎಂಬುದನ್ನು ಅಧಿಕಾರಿಗಳೇ ಹೇಳಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಹೊಸ ಆಸ್ತಿ ಯಾವುದನ್ನೂ ಖರೀದಿಸಿಲ್ಲ, ನನ್ನ ಹೇಗಾದರೂ ಚಚ್ಚಿ ಚಚ್ಚಿ ತಡೆಯುವ ಯತ್ನ ನಡೆದಿದೆ. ಬಿಜೆಪಿಯವರು ನನ್ನ ವಿರುದ್ಧ ಏನೇನು ಷಡ್ಯಂತ್ರ ನಡೆಸ್ತಿದ್ದಾರೆ ಗೊತ್ತಿದೆ. ಷಡ್ಯಂತ್ರ ನಡೆಸಿದ್ದಾರೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ ಎಂದು ಗುಡುಗಿದರು.
ರಾಹುಲ್ ಗಾಂಧಿಗೂ ತೊಂದರೆ ಕೊಟ್ಟರು. ಸೋನಿಯಾ ಗಾಂಧಿಯವರಿಗೆ ಕೊಡಬಾರದ ಕಾಟ ಕೊಡುತ್ತಿದ್ದಾರೆ. ಅವರನ್ನೇ ಬಿಡಲಿಲ್ಲ ಇನ್ನು ನನ್ನ ಬಿಡ್ತಾರೇನ್ರಿ? ಎಂದು ಪ್ರಶ್ನಿಸಿದರು. ಇವನು ಇರೋದಿಕ್ಕೆ ತಾನೆ ಕಾಂಗ್ರೆಸ್ ಗಟ್ಟಿಯಾಗ್ತಿದೆ ಎಂದು ಏನೇನು ಪ್ರಯತ್ನ ಮಾಡುತ್ತಿದ್ದಾರೆ. ಕನಕಪುರದಲ್ಲಿ ಯಾರು ನಿಲ್ತಾರೆ ಎಂಬುದನ್ನು ಕಾಲವೇ ನಿರ್ಣಯಿಸುತ್ತದೆ ಎಂದು ಹೇಳಿದರು.