alex Certify BIG NEWS: ನನ್ನ ವಿರುದ್ಧದ ಆರೋಪಕ್ಕೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ; ಈಗ ರೂಪಾ ಮೌದ್ಗಿಲ್ ಮುಖವಾಡವೇ ಕಳಚಿ ಬಿದ್ದಿದೆ; ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನನ್ನ ವಿರುದ್ಧದ ಆರೋಪಕ್ಕೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ; ಈಗ ರೂಪಾ ಮೌದ್ಗಿಲ್ ಮುಖವಾಡವೇ ಕಳಚಿ ಬಿದ್ದಿದೆ; ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಾಗ್ದಾಳಿ

ಬೆಂಗಳೂರು: ನನ್ನ ವಿರುದ್ಧ ಕರಕುಶಲ ನಿಗಮದ ಎಂ.ಡಿ. ಡಿ. ರೂಪಾ ಮೌದ್ಗಿಲ್ ಮಾಡುತ್ತಿರುವ ಆರೋಪ ಸುಳ್ಳು. ಇದು ಅವರಿಗೆ ಶೋಭೆ ತರುವ ವಿಚಾರವಲ್ಲ. ಅಸಲಿಗೆ ಅವರೇ ನಿಗಮಕ್ಕೆ ಹೊರೆಯಾಗಿದ್ದಾರೆ ಎಂದು ಕರಕುಶಲ ನಿಗಮದ ಅಧ್ಯಕ್ಷ ಬಿ. ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ರಾಘವೇಂದ್ರ ಶೆಟ್ಟಿ, ಕಳಂಕಿತ ಅಧಿಕಾರಿಯ ಮರು ನೇಮಕಕ್ಕೆ 5 ಕೋಟಿ ರೂಪಾಯಿ ಡೀಲ್ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನನ್ನ ವಿರುದ್ಧ ಆರೋಪಕ್ಕೆ ಯಾವುದೇ ದಾಖಲೆಗಳಿದ್ದರೂ ಬಿಡುಗಡೆ ಮಾಡಲಿ ಎಂದರು.

ಬಿಕಾಂ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಶ್ರೀಕಾಂತ್ ಎಂಬ ಆಪ್ತ ಸಹಾಯಕ ನನ್ನ ಬಳಿ ಬಂದಿದ್ದು ನಿಜ. ಆತನ ವಿರುದ್ಧ ಆರೋಪ ಕೇಳಿಬಂದ ಕೂಡಲೇ ಆತನನ್ನು ಕೆಲಸದಿಂದ ವಜಾ ಮಾಡಿದ್ದೇನೆ. ತನಿಖೆಯಲ್ಲಿ ಆರೋಪ ಸಾಬೀತಾಗಿಲ್ಲ ಎಂದು ಗೊತ್ತಾಗಿದೆ. ಪೊಲೀಸರು ಆತ ನಿರಪರಾಧಿ ಎಂದು ಬಿಟ್ಟು ಕಳುಹಿಸಿದ್ದಾರೆ. ನನ್ನ ವಿರುದ್ಧ 5 ಕೋಟಿ ಭ್ರಷ್ಟಾಚಾರ ಆರೋಪಕ್ಕೆ ದಾಖಲೆ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಇದು ಕರಕುಶಲ ಅಭಿವೃದ್ಧಿ ನಿಗಮದ ಗೌರವದ ವಿಚಾರ. ಈವರೆಗೆ ರೂಪಾ ಅವರಿಗೆ 75 ಬಾರಿ ನಾನು ನೋಟೀಸ್ ನೀಡಿದ್ದೇನೆ. ಈಗ ಅವರು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂತಹ ಆರೋಪ ಮಾಡುತ್ತಿದ್ದಾರೆ. ನಿಗಮದಲ್ಲಿ 24 ಕೋಟಿ ಹಗರಣ ಕೂಡ ನನ್ನ ಅವಧಿಯಲ್ಲಿ ಆಗಿಲ್ಲ. ರೂಪಾ ಮೌದ್ಗಿಲ್ ಎರಡು ದಿನಕ್ಕೊಮ್ಮೆ ಕಚೇರಿಗೆ ಬರುತ್ತಾರೆ. ಮನೆಗೆ ಫೈಲ್ ತರಿಸಿಕೊಂಡು ಮನೆಯಲ್ಲಿಯೇ ಕೆಲಸ ಮಾಡುತ್ತಾರೆ. ಸರ್ಕಾರಿ ವಾಹನದಲ್ಲಿ ಒಂದು ಮನೆಯ ಬಳಕೆಗೆ ಮತ್ತೊಂದು ವೈಯಕ್ತಿಕ ಬಳಕೆಗೆ ಉಪಯೋಗಿಸುತ್ತಿದ್ದಾರೆ. ನಿಗಮದ ಅಧ್ಯಕ್ಷನಾದ ನನಗೆ ಕಚೇರಿ ದಾಖಲೆಗಳನ್ನು ಕೊಡಲ್ಲ. ಈ ಬಗ್ಗೆ ನಾನು ಮಾಧ್ಯಮಗಳ ಮುಂದೆ ಹೋಗುತ್ತೇನೆ ಎಂಬ ಭಯಕ್ಕೆ ಅವರೇ ನನ್ನ ವಿರುದ್ಧ ಆರೋಪ ಮಾಡಿ ಮಾಧ್ಯಮಗಳ ಮುಂದೆ ಹೋಗಿದ್ದಾರೆ ಎಂದು ಆರೋಪಿಸಿದರು.

ಕಾರು ಅಪಘಾತದ ಬಳಿಕ ಇನ್ಶೂರೆನ್ಸ್ ಕಂಪನಿಗೆ ಮಾಹಿತಿ ನೀಡಿಲ್ಲ. ಇದರಿಂದ ನಿಗಮವೇ ಕಾರಿನ ರಿಪೆರಿ ಹಣ ಖರ್ಚು ಮಾಡಬೇಕಿದೆ. ನನ್ನ ಕಚೇರಿಯಲಿದ್ದ ಸಿಸಿ ಟಿವಿ ಕನೆಕ್ಷನ್ ಕೂಡ ಕಟ್ ಮಾಡಿದ್ದಾರೆ. ಐಪಿಎಸ್ ಅಧಿಕಾರಿಯಾಗಿ ಇಂತಹ ಸಣ್ಣ ಮಟ್ಟಕ್ಕೆ ಇಳಿದಿರುವುದು ಬೇಸರದ ಸಂಗತಿ ಎಂದು ಕಿಡಿಕಾರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...