ಹುಬ್ಬಳ್ಳಿ: ಪಕ್ಷಕ್ಕೆ ಬರುವಂತೆ ಬಿಜೆಪಿ ಕೆಲ ನಾಯಕರು ನನ್ನನ್ನು ಆಹ್ವಾನಿಸಿದ್ದು ನಿಜ. ಆದರೆ ನಾನು ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಬಿಜೆಪಿ ಸೇರ್ಪಡೆಗೆ ಬಿಜೆಪಿಯ ಕೆಲ ಹಿರಿಯ ನಾಯಕರೆ ವಿರೋಧ ವ್ಯಕ್ತಪಡಿಸಿದ್ದು, ಆರೋಪಗಳ ಮೂಲಕ ಹೈಕಮಾಂಡ್ ಗೆ ಪತ್ರ ರವಾನಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ್ ಹೊರಟ್ಟಿ, ನನ್ನ ವಿರುದ್ಧದ ಆರೋಪಕ್ಕೆ ನಾನು ಶೀಘ್ರದಲ್ಲಿಯೇ ಉತ್ತರಿಸುತ್ತೇನೆ. ಆದರೆ ಬಿಜೆಪಿಗೆ ಬರುವಂತೆ ಕೆಲ ಹಿರಿಯರೆ ಆಹ್ವಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.
BIG NEWS: ಹಿಜಾಬ್ ಗೆ ಪಟ್ಟು ಹಿಡಿದು ಪರೀಕ್ಷೆಗೆ ಗೈರಾದರೆ ಮರು ಪರೀಕ್ಷೆ ಅವಕಾಶವಿಲ್ಲ; ಮತ್ತೆ ಎಚ್ಚರಿಕೆ ನೀಡಿದ ಕಾನೂನು ಸಚಿವ
ನನ್ನ ವಿರುದ್ಧ 40 ವರ್ಷಗಳ ಹಿಂದಿನ ವಿಚಾರವನ್ನು ಮುಂದಿಟ್ಟು ಆರೋಪಿಸಿದ್ದಾರೆ. ಅಂದು ಏನಾಯಿತು ಎಂಬ ಬಗ್ಗೆ ನನ್ನ ಬಳಿ ದಾಖಲೆಯಿದೆ. ದಾಖಲೆಗಳ ಸಮೇತ ಎಲ್ಲದಕ್ಕೂ ಉತ್ತರ ನೀಡುತ್ತೇನೆ. ನಾನು ಬೆಂಗಳೂರಿನಲ್ಲಿದ್ದಾಗ ಧಾರವಾಡದಲ್ಲಿ ನನ್ನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಎಫ್ಐಆರ್ ಗೆ ತಡೆಯಾಜ್ಞೆ ಕೂಡ ಸಿಕ್ಕಿದೆ. ಅಲ್ಲದೇ ಎಫ್ಐಆರ್ ಹಾಕಿದ್ದ ಇನ್ಸ್ ಪೆಕ್ಟರ್ ಸಸ್ಪೆಂಡ್ ಆಗಿದ್ದಾರೆ. ಎಲ್ಲಾ ವಿಚಾರಗಳ ಬಗ್ಗೆಯೂ ಉತ್ತರ ನೀಡುವವನಿದ್ದೇನೆ ಎಂದು ಹೇಳಿದರು.